ಮಂಗಳೂರು, ಆ. 16 (DaijiworldNews/TA): ಕಟೀಲು ದುರ್ಗಾಪರಮೇಶ್ವರೀ ದೇಗುಲದ ರಥಬೀದಿಯಲ್ಲಿ ಕಟೀಲು ದೇವಸ್ಥಾನ, ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ದೇಶದ 79ನೇ ಸ್ವಾತಂತ್ರೋತ್ಸವ ಸಂಭ್ರಮದ ಪ್ರಯುಕ್ತ ಧ್ವಜಾರೋಹಣ ನಡೆಯಿತು.

ಕಟೀಲು ದೇಗುಲದ ಆನೆ 'ಮಹಾಲಕ್ಷ್ಮಿ' ಸ್ವಾತಂತ್ರೋತ್ಸವದ ದಿನ ವಿಶೇಷವಾಗಿ ಅಲಂಕೃತಗೊಂಡು ರಾಜಗಾಂಭೀರ್ಯದ ನಡೆಯೊಂದಿಗೆ ಆಗಮಿಸಿ ಮೂರು ಬಾರಿ ಜೋರಾಗಿ ಘೀಳಿಟ್ಟು ಮೊಣಕಾಲೂರಿ ರಾಷ್ಟ್ರಧ್ವಜಕ್ಕೆ ನಮಿಸಿ ಧ್ವಜವಂದನೆ ಸಲ್ಲಿಸಿತು. ಎನ್ಸಿಸಿ, ಸೌಟ್ಸ್- ರೇಂಜರ್ಸ್ ಮುಂತಾದ ನಾನಾ ತಂಡಗಳಿಂದ ಪಥಸಂಚಲನ, ಧ್ವಜವಂದನೆ ನಡೆಯಿತು.
ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ, ಆನುವಂಶಿಕ ಮೊಕ್ತಸರ ವಾಸುದೇವ ಆಸ್ರಣ್ಣ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ವೆಂಕಟರಮಣ ಆಸ್ರಣ್ಣ ಅನಂತಪದ್ಮನಾಭ ಆಸ್ರಣ್ಣ ಕಮಲಾದೇವಿ ಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣ ದಾಸ ಆಸ್ರಣ್ಣ, ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.