ಮಂಗಳೂರು, ಆ. 16 (DaijiworldNews/TA): ಜೆಪ್ಪು ಬಪ್ಪಾಲ್ ಒಂದನೇ ಅಡ್ಡ ರಸ್ತೆಯ ಪರಿಸರದಲ್ಲಿ ಬಪ್ಪಾಲ್ ಫ್ರೆಂಡ್ಸ್ ವತಿಯಿಂದ 79ನೇ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೊರೇಟರ್ ಭರತ್ ಹಾಗೂ ರೆಜಿನೊಲ್ಡ್, ಶ್ರೀಮತಿ ಅನಿತಾ, ಶ್ರೀಮತಿ ಆಶಾ, ಶ್ರೀಮಾನ್ ಅಲನ್,ಶ್ರೀಮಾನ್ ಆನಂದ್ ಅತಿಥಿಗಳಾಗಿ ಭಾಗವಹಿಸದ್ದರು. ಬಪ್ಪಾಲ್ನ ನಿವಾಸಿಗಳು ಮತ್ತು ಬಪ್ಪಾಲ್ ಫ್ರೆಂಡ್ಸ್ ತಂಡದ ಸದಸ್ಯರು ಉಪಸ್ಥಿತರಿದ್ದರು. ಬಪ್ಪಾಲ್ನ ಹಿರಿಯ ಸದಸ್ಯ ಹಾಗೂ ಉದ್ಯಮಿ ರೆಜಿನೊಲ್ಡ್ ಡಿ'ಕೋಸ್ಟ ಧ್ವಜಾರೋಹಣ ನೆರವೇರಿಸಿದರು. ಜೊಸಿ ಅವರು ಕಾರ್ಯಕ್ರಮ ನಿರೂಪಿಸಿದರು ಮತ್ತು ಜೈಸನ್ ಅವರು ವಂದಿಸಿದರು.