ಕಾಸರಗೋಡು, ಆ. 16 (DaijiworldNews/AK): ಡಿವೈಎಸ್ಪಿ ಸಿ ಕೆ ಸುನಿಲ್ ಕುಮಾರ್ ಅವರು ಪೊಲೀಸ್ ಇಲಾಖೆಗೆ ನೀಡಿದಂತಹ ಪ್ರಶಂಸನೀಯ ಸೇವೆಗಾಗಿ ಭಾರತದ ರಾಷ್ಟ್ರಪತಿ ನೀಡುವ ಪೊಲೀಸ್ ಪದಕವನ್ನು ಆಗಸ್ಟ್ 15 ಸ್ವಾತಂತ್ರೋತ್ಸವದಂದು ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯ್ ಅವರು ನೀಡಿ ಗೌರವಿಸಿದರು.

ಸುನಿಲ್ ಕುಮಾರ್ ಅವರು , 2023 ರಲ್ಲಿ ಕೇರಳ ರಾಜ್ಯದ ವಿವಿಧ ಸ್ಥಳಗಳಿಗೆ ಸಾಗಟವಾಗುತ್ತಿದ್ದ ಎಂಡಿಎಂಎ ಡ್ರಗ್ಸ್ ಜಾಲದ ಪ್ರಮುಖ ಆರೋಪಿಗಳನ್ನು ಬೆಂಗಳೂರಿನಲ್ಲಿ ಕಂಡುಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗೆಯೆ ಚೆರುವತೂರಿನ ವಿಜಯ ಬ್ಯಾಂಕ್ ದರೋಡೆ ಪ್ರಕರಣ, ಕಾಸರಗೋಡು ಕೂಡ್ಲು ಸಹಕರಣ ಬ್ಯಾಂಕ್ ದರೋಡೆ ಪ್ರಕರಣ, ರಾಜಧಾನಿ ಜುವೆಲ್ಲರಿ ದರೋಡೆ ಪ್ರಕರಣ, ನೀಲೇಶ್ವರದ ತಂಗಮನಿ ಕೊಲೆ ಕೇಸ್, ಪೆರಿಯ ಸುಬೈದಾ ಕೊಲೆ ಕೇಸ್, ಚೀಮೇನಿಯ ಜಾನಕೀ ಕೊಲೆ ಕೇಸ್ ನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು.
2015 ರಲ್ಲಿ ಸೈಬರ್ ಪೊಲೀಸ್ ಉದ್ಯೋಗಿಗಳಿಗೆ ನಾಸ್ಕಾಂ ನೀಡುವ ಇಂಡಿಯನ್ ಸೈಬರ್ ಕಾಪ್ ಅವಾರ್ಡ್,, ಪಡೆದಿದ್ದರು. ಪೊಲೀಸ್ ಇಲಾಖೆ ಗೆ ನೀಡಿದ ಪ್ರಶಂಸನೀಯ ಸೇವೆಗಾಗಿ ಮುಖ್ಯ ಮಂತ್ರಿ ಪದಕ, ನಾಲ್ಕು ಬಾರಿ ಕೇರಳ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಪದಕ, 103 ಬಾರಿ ಗುಡ್ ಸರ್ವಿಸ್ ಪ್ರವೇಶವನ್ನು ಪಡೆದಿದ್ದರು. ಇವರು ಕಾಸರಗೋಡು ಜಿಲ್ಲೆಯವರಾಗಿದ್ದಾರೆ.