ಮಂಗಳೂರು, ಆ. 15 (DaijiworldNews/AA): ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಎದುರುಪದವು ಮೂಡುಶೆಡ್ಡೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.





79 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಅಧ್ಯಕ್ಷ ಇಕ್ಬಾಲ್ ಎ.ಪಿ, ಮಸೀದಿಯ ಮಾಜಿ ಅಧ್ಯಕ್ಷರುಗಳಾದ ಎಸ್ ಆಲಿಯಬ್ಬ, ಹಾಜಿ ಮಹಮ್ಮದ್ ಹನೀಫ್, ಮಾಜಿ ಉಪಾಧ್ಯಕ್ಷ ಎಂ.ಡಿ ಜಬ್ಬಾರ್, ಖತೀಬರಾದ ಸಫ್ವಾನ್ ಇರ್ಫಾನಿ ಮುಂಡೋಳೆ, ಉಪಾಧ್ಯಕ್ಷ ಅಬ್ದುಲ್ ರಝಾಕ್ ಎ.ಆರ್ ಇತರ ಗಣ್ಯರು ಸೇರಿ ನೆರವೇರಿಸಿದರು.
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮದರಸ ವಿದ್ಯಾರ್ಥಿಗಳಿಗೆ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಇದರ ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಸದರ್ ಉಸ್ತಾದ್ ಝುಬೇರ್ ಯಮಾನಿ, ಮುಅಲ್ಲಿಂ ಜಾಬೀರ್ ಜೌಹರಿ ಕಲ್ಲಡ್ಕ, ಹಿರಿಯಾರದಾ ಹಾಜಿ ಹನೀಫ್ ಮೌಲಾವಿ, ಕಾರ್ಯದರ್ಶಿ ಸಾಜುದ್ದೀನ್, ಕೋಶಾಧಿಕಾರಿ ಇಮ್ರಾನ್ ಅಲಿ, ಮಾಜಿ ಉಪಾಧ್ಯಕ್ಷ ಮನ್ಸೂರ್, ಹಿರಿಯರಾದ ಅಬ್ದುಲ್ ಬಶೀರ್, ಬದ್ರಿಯಾ ಯಂಗ್ ಮೆನ್ಸ್ ಅಧ್ಯಕ್ಷ ನೌಶಾದ್, ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಜೊತೆ ಕಾರ್ಯದರ್ಶಿ ಆರೀಫ್, ಮಾಜಿ ಸದಸ್ಯರಾದ ಅಬ್ದುಲ್ ರಝಾಕ್ ಮಂದಾರ ಮತ್ತಿತರರು ಉಪಸ್ಥಿತರಿದ್ದರು.