ಕಾಸರಗೋಡು, ಆ. 13 (DaijiworldNews/TA): ಪೊಲೀಸ್ ಠಾಣೆ ಗಳು ಜನಮೈತ್ರಿ ಕೇಂದ್ರಗಳಾಗಿ ಪರಿವರ್ತನೆ ಗೊಂಡಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟರು. ಅವರು ಮಂಗಳವಾರ ಮೇಲ್ಪರಂಬು ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಳೆದ 9 ವರ್ಷಗಳಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದೆ. ಸೌಲಭ್ಯ ಗಳನ್ನು ಹೆಚ್ಚಿಸಲಾಗಿದೆ . ಪೊಲೀಸ್ ಮತ್ತು ನಾಗರಿಕರ ನಡುವೆ ಬಾಂಧವ್ಯ ಉತ್ತಮ ಪಡಿಸಬೇಕು. ನೆಮ್ಮದಿಯ ಬದುಕು ನಿರ್ಮಾಣವಾಗಬೇಕು. ಠಾಣೆ ಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಪೊಲೀಸ್ ಠಾಣೆ ಗಳಲ್ಲಿ ಕಲ್ಪಿಸಲಾಗಿದೆ ಎಂದರು.
ಅರಣ್ಯ ಸಚಿವ ಎ.ಕೆ ಶಶೀಂದ್ರನ್ ಅಧ್ಯಕ್ಷತೆ ವಹಿಸಿ ಶಿಲಾ ಫಲಕ ಅನಾವರಣ ಗೊಳಿಸಿದರು. ಶಾಸಕ ಸಿ. ಎಚ್ ಕುಞಿಂಬು ,.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನ್ ವಾಜ್ ಪಾದೂರು, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸಿ. ಎ ಸೈಮಾ, ಬ್ಲಾಕ್ ಪಂಚಾಯತ್ ಸದಸ್ಯೆ ಖದೀಜತ್ ಸಮೀಮಾ, ಚೆಮ್ನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಫೈಜಾ ಅಬೂಬಕ್ಕರ್ , ಉದುಮ ಪಂಚಾಯತ್ ಅಧ್ಯಕ್ಷೆ ಎಂ.ಲಕ್ಷ್ಮೀ, ಚೆಮ್ನಾಡ್ ಪಂಚಾಯತ್ ಸದಸ್ಯರಾದ ಮರಿಯಾ ಮಾಹಿನ್, ಬೇಕಲ ಉಪ ವಿಭಾಗದ ಡಿ ವೈ ಎಸ್ಪಿ ವಿ.ವಿ ಮನೋಜ್, ಮತ್ತಿತರರು ಉಪಸ್ಥಿತರಿದ್ದರು.