ಸುಳ್ಯ, ಆ. 10(DaijiworldNews/TA): ಲೋಕ ಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಕರ್ನಾಟಕದ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ದಾಖಲೆ ಸಹಿತ ದೇಶದ ಜನತೆಯ ಮುಂದಿಟ್ಟು ಬಿ ಜೆ ಪಿ ಯವರ ಮೋಸವನ್ನು ಬಯಲಿಗೆಳೆದಿದ್ದಾರೆ. ಈ ರೀತಿಯ ಮತಗಳ ಕಳವು ಮಾಡಿ ಮೋದಿಯವರು ದೇಶದ ಪ್ರಧಾನಿಯಾಗಿದ್ದಾರೆ ಎಂದು ಈಗ ಗೊತ್ತಾಗುತ್ತಿದೆ ಎಂದು KPCC ಪ್ರಧಾನ ಕಾರ್ಯದರ್ಶಿ TM ಶಹೀದ್ ತೆಕ್ಕಿಲ್ ಆರೋಪಿಸಿದ್ದಾರೆ.

ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಒಬ್ಬ ವ್ಯಕ್ತಿಗೆ ಒಂದು ಮತ ಎಂಬುದನ್ನು ಸಂವಿಧಾನ ಸಾರಿ ಹೇಳಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಒಬ್ಬರೇ ಹಲವು ಮತಗಳನ್ನು ಹಲವು ಕಡೆ ಗಳಲ್ಲಿ ಹಾಕುವ ಮೂಲಕ ಅಕ್ರಮ ನಡೆಸಿದ್ದಾರೆ. ಚುನಾವಣಾ ಆಯೋಗ ಬಿಜೆಪಿ ಸೇರಿಕೊಂಡಿರುವುದು ವಿಪರ್ಯಾಸವಾಗಿದೆ. ಕರ್ನಾಟಕದಲ್ಲಿ ಇನ್ನೂ ಕೆಲವು ಕ್ಷೇತ್ರಗಳಲ್ಲಿಯೂ ಇದೇ ರೀತಿಯ ಮತಗಳವು ನಡೆದಿದೆ ಎಂದು ರಾಹುಲ್ ಗಾಂಧಿಯವರು ಆರೋಪಿಸಿದ್ದಾರೆ ಇದು ವಾಸ್ತವ ಸಂಗತಿಯೂ ಹಾಗಿದೆ ಎಂದು ಅವರು ಹೇಳಿದರು.