ಮಂಗಳೂರು, ಆ. 01 (DaijiworldNews/AA): ಮಹಿಳಾ ಆಶ್ರಯ ಕೇಂದ್ರದಲ್ಲಿ ದಾಖಲಾಗಿದ್ದ ಒಡಿಶಾ ಮೂಲದ ಯುವತಿಯೊಬ್ಬಳು ಕೌಂಪೌಂಡ್ ಹಾರಿ ಪರಾರಿಯಾಗಿದ್ದಾಳೆ. ಈಕೆಯ ಪತ್ತೆಗಾಗಿ ಪೋಲೀಸರು ಲುಕ್ಔಟ್ ನೋಟಿಸ್ ಹೊರಡಿಸಿದ್ದಾರೆ.

ಒಡಿಷಾ ಮೂಲದ ತ್ರಿಶಾ (22) ನಾಪತ್ತೆಯಾದ ಯುವತಿ.
ಕಳೆದ ವರ್ಷ ತ್ರಿಶಾ ಉದ್ಯೋಗದ ಹುಡುಕಾಟದಲ್ಲಿ ಮಂಗಳೂರಿಗೆ ಬಂದಿದ್ದಳು ಎನ್ನಲಾಗಿದ್ದು ಬಳಿಕ, ಇತ್ತೀಚೆಗೆ ಮಡಿಪುವಿನ ಪ್ರಜ್ಞಾ ಆಶ್ರಯ ಮಂದಿರದಲ್ಲಿ ವಾಸವಾಗಿದ್ದಳು. ಈಕೆ ಜುಲೈ 30 ರಂದು ರಾತ್ರಿ ಅಡುಗೆ ಕೋಣೆಯ ಬಾಗಿಲು ತೆರೆದು ಕೌಂಪೌಂಡ್ ಹಾರಿ ನಾಪತ್ತೆಯಾದ್ದಾಳೆ.
ತ್ರಿಶಾ ಆಕಾಶ್ ಮತ್ತು ಮಾನನಿ ದಂಪತಿ ಮಗಳು. ಆಕೆ ಸುಮಾರು 4 ಅಡಿ ಎತ್ತರ, ಕಪ್ಪು ಮೈಬಣ್ಣ ಮತ್ತು ಸದೃಢ ದೇಹವನ್ನು ಹೊಂದಿದ್ದಾಳೆ. ಆಕೆಯ ಕೂದಲು ಕಪ್ಪಗಿದೆ. ಆಕೆ 5ನೇ ತರಗತಿಯವರೆಗೆ ಓದಿದ್ದು, ಹಿಂದಿ ಮತ್ತು ಒಡಿಯಾ ಭಾಷೆಗಳನ್ನು ಮಾತನಾಡುತ್ತಾಳೆ. ತಪ್ಪಿಸಿಕೊಳ್ಳುವಾಗ ಆಕೆ ಬಿಳಿ ಚೂಡಿದಾರ್ ಟಾಪ್ ಮತ್ತು ನೀಲಿ ಲೆಗ್ಗಿಂಗ್ಸ್ ಧರಿಸಿದ್ದಳು.
ಈ ಬಗ್ಗೆ ಆಶ್ರಮದ ಅಧೀಕ್ಷಕಿ ನೀಡಿದ ದೂರಿನ ಮೇರೆಗೆ, ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಅವಳ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಸಾರ್ವಜನಿಕರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ತ್ರಿಶಾ ಪತ್ತೆಯಾದಲ್ಲಿ, ಕೊಣಾಜೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರನ್ನು 9480802315, 9019873901, ಅಥವಾ 0824-2220536 ಸಂಖ್ಯೆಗಳಲ್ಲಿ ಸಂಪರ್ಕಿಸಲು ವಿನಂತಿಸಲಾಗಿದೆ. konajemgc@ksp.gov.in ಗೆ ಇ-ಮೇಲ್ ಮೂಲಕವೂ ಮಾಹಿತಿಯನ್ನು ನೀಡಬಹುದು.