ಕಾಸರಗೋಡು,ಜು. 31 (DaijiworldNews/AK): ಮಸೀದಿ ಆವರಣದಲ್ಲಿ ಇರಿಸಿದ್ದ ಕಾರು ಅಗ್ನಿಗಾಹುತಿಯಾದ ಘಟನೆ ನೆಲ್ಲಿಕಟ್ಟೆ ಸಮೀಪದ ಪೈಕ ದಲ್ಲಿ ನಡೆದಿದೆ. ಕಾರು ಸಂಪೂರ್ಣ ಹೊತ್ತಿ ಉರಿದಿದೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಮುಂದಾದರು.



ಇಂದು ಮುಂಜಾನೆ ಮೂರುಗಂಟೆ ಸುಮಾರಿಗೆ ಘಟನೆ ನಡೆದಿದೆ. ಕಾರಿನಲ್ಲಿದ್ದ ಪಾಸ್ ಫೋರ್ಟ್ ಸೇರಿದಂತೆ , ಇತರ ದಾಖಲೆಗಳು ಹೊತ್ತಿ ಉರಿದಿವೆ. ಸಮೀಪದಲ್ಲೇ ಇದ್ದ ಶಾಲಾ ಬಸ್ಸು, ಸ್ಕೂಟರ್ ಗೂ ಹಾನಿ ಉಂಟಾಗಿದೆ.
ಮಸೀದಿಯ ಉಸ್ತಾದ್ ರಝಾ ಬಾಫಖಿ ಹೈತಮಿ ಎಂಬವರ ಕಾರು ಎಂದು ತಿಳಿದುಬಂದಿದೆ.