ಕಾಸರಗೋಡು,ಜು. 31 (DaijiworldNews/AK): ಸ್ಕೂಟರ್ ಪ್ರಯಾಣಿಕ ನೋರ್ವ ನಿಂದ 1.800 ಕಿಲೋ ಗಾಂಜಾವನ್ನು ಕುಂಬಳೆ ಅಬಕಾರಿ ದಳದ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.

ಬಂದ್ಯೋಡಿನ ಮುಹಮ್ಮದ್ ಅಲಿ (51) ಎಂಬಾತನನ್ನು ಬಂಧಿಸಲಾಗಿದೆ. ಮಂಗಳವಾರ ರಾತ್ರಿ ಕುಂಬಳೆ ಶಿರಿಯ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಸ್ಕೂಟರ್ ಪ್ರಯಾಣಿಕನನ್ನು
ತಪಾಸಣೆ ನಡೆಸಿದಾಗ ಗಾಂಜಾ ಸಾಗಾಟ ಪತ್ತೆಯಾಗಿದೆ.