ಮಂಗಳೂರು, ಜು. 30 (DaijiworldNews/AK):ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಒಬ್ಬರು ಇಲಿ ಪಾಷಾಣವನ್ನು ಔಷಧಿ ಎಂದು ತಪ್ಪಾಗಿ ಭಾವಿಸಿ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೃತರನ್ನು ಸುರತ್ಕಲ್ ಬಳಿಯ ಚೆಲ್ಯಾರು ನಿವಾಸಿ ಮತ್ತು ಹರೇಕಳ ಮೂಲದ ಮಂಜುನಾಥ ಹೆಗ್ಡೆ (44) ಎಂದು ಗುರುತಿಸಲಾಗಿದೆ. ಅವರು ಆರೋಗ್ಯ ಸಮಸ್ಯೆಗೆ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಆಕಸ್ಮಿಕವಾಗಿ ಅವರು ಔಷದ ಎಂದು ಇಲಿ ವಿಷ ಸೇವಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.