ಕಾಸರಗೋಡು, ಜು. 29 (DaijiworldNews/AK): ಯುವತಿಗೆ ವ್ಯಕ್ತಿಯೋರ್ವ ಕಿರುಕುಳ ನೀಡಿದ ಪ್ರಕರಣ ಸಂಬಂಧ ಆರೋಪಿಯನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸಕಲೇಶಪುರ ನಿವಾಸಿ ಪ್ರಸ್ತುತ ಕುಂಬಳೆ ಅರಿಕ್ಕಾಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸುಹೈಬ್ (25) ಬಂಧಿತ ಆರೋಪಿ. ಕುಂಬಳೆ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಆರೋಪಿ ಕಿರುಕುಳ ನೀಡಿದ್ದಾನೆ.
ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ರೈಲು ನಿಲ್ದಾಣ ಪರಿಸರದ ಸಿಸಿಟಿವಿ ದೃಶ್ಯ ವನ್ನು ಪರಿಶೀಲಿಸಿದ ಪೊಲೀಸರು ಆರೋಪಿಯ ಗುರುತು ಪತ್ತೆ ಹಚ್ಚಿದ್ದು, ಕುಂಬಳೆ ಪೇಟೆಯಿಂದ ನಾಗರಿಕರ ಸಹಾಯದೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.