ಕಾಸರಗೋಡು, ಜು. 28 (DaijiworldNews/AA): ವಿದ್ಯುತ್ ತಂತಿ ಸ್ಪರ್ಶಿಸಿ ಕೃಷಿಕ ಹಾಗೂ ಜೊತೆಗಿದ್ದ ಹಸುವು ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಕೋಳಿಯಡ್ಕದ ವಯಳಂಕುಳಿ ಎಂಬಲ್ಲಿ ನಡೆದಿದೆ.

ವಯಳಂಕಳಿಯ ಕುಞಿ ಂಡನ್ ನಾಯರ್(75) ಮೃತಪಟ್ಟವರು.
ತುಂಡಾಗಿ ಬಿದ್ದಿದ್ದ ತಂತಿ ತುಳಿದು ಈ ಅವಘಡ ನಡೆದಿದೆ. ಕೃಷಿಕ ಹಾಗೂ ಜೊತೆಗಿದ್ದ ಹಸು ಕೂಡಾ ಮೃತಪಟ್ಟಿದೆ. ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಹಸು ಮೇಯಿಸಲು ಮನೆ ಸಮೀಪದ ಬಯಲಿಗೆ ತೆರಳಿದ್ದ ಸಂದರ್ಭದಲ್ಲಿ ತುಂಡಾಗಿ ಬಿದ್ದಿದ್ದ ತಂತಿಯನ್ನು ತುಳಿದು ಘಟನೆ ನಡೆದಿದೆ.
ತಂದೆ ತಡವಾದರೂ ಮರಳದ ಹಿನ್ನಲೆಯಲ್ಲಿ ಮಗ ರಾಜನ್ ಹುಡುಕಿಕೊಂಡು ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದರು. ಮೃತ ದೇಹವನ್ನು ಕಾಸ ರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.