ಮಂಜೇಶ್ವರ, ಜು. 28 (DaijiworldNews/AA): ಬಾಕ್ರಬೈಲು ಎ.ಯು.ಪಿ ಶಾಲೆಯಲ್ಲಿ ಸಾಹಿತ್ಯ ಸಂಘದ ಉದ್ಘಾಟನಾ ಸಮಾರಂಭವು ಜುಲೈ 26ರಂದು ನಡೆಯಿತು.

ಶಾಲಾ ಮುಖ್ಯೋಪಾಧ್ಯಾಯರಾದ ಅಬ್ದುಲ್ ಕರೀಂ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶೇಷವಾಗಿ ವಿದ್ಯಾರ್ಥಿಗಳಿಂದಲೇ ನಡೆದ ಈ ಕಾರ್ಯಕ್ರಮಕ್ಕೆ ಶಾಲಾ ಸಾಹಿತ್ಯ ಸಂಘದ ಅಧ್ಯಕ್ಷೆ ಕುಮಾರಿ ಮುಫೀದ ಅಧ್ಯಕ್ಷತೆ ವಹಿಸಿದ್ದು, ಫಾತಿಮಾತ್ ರಿಸ್ನ ಸ್ವಾಗತಿಸಿ, ಆಯಿಷತ್ ಆಫಿಯ ವಂದಿಸಿದರು.
ಶಾಲಾ ಸಾಹಿತ್ಯ ಸಂಘದ ಸಂಚಾಲಕಿ ಶಕೀಲಾ ಟೀಚರ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿಯರಾದ ಸೃಜಿತಾ, ನಿರೀಕ್ಷಾ ಹಾಗೂ ಅಂಶಿತ ಇವರು ಪ್ರಾರ್ಥನೆಗೈದರು. ಕಾರ್ಯಕ್ರಮಕ್ಕೆ ಎಲ್ಲಾ ಅಧ್ಯಾಪಕ ವೃಂದದವರು ಸಹಕರಿಸಿದರು.