ಮಂಗಳೂರು: 40 ವರ್ಷ ಯಶಸ್ವಿಯಾಗಿ ಪೂರೈಸಿದ ಎಂಜಿ ರಸ್ತೆಯ 'ಆಭರಣ' ಮಳಿಗೆ
Sat, Jul 26 2025 12:07:24 PM
ಮಂಗಳೂರು, ಜು. 26 (DaijiworldNews/AA): ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಎಂ.ಜಿ. ರಸ್ತೆಯ 'ಆಭರಣ' ಮಳಿಗೆ ಕೇವಲ ಅಭರಣ ಅಂಗಡಿ ಮಾತ್ರವಲ್ಲ, ನಂಬಿಕಸ್ಥ ಗ್ರಾಹಕರ ನೆಲೆಯೂ ಎಂದೆನಿಸಿಕೊಂಡಿದೆ.
ಮಂಗಳೂರು ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ 1985ರಲ್ಲಿ ತೆರೆದ ಆಭರಣ ಮಳಿಗೆ 40 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಬೆಂಗಳೂರಿನ ಮೋಡಿಯ ನಡುವೆ ಇಲ್ಲಿನ ಬಹುಮುಖ ಗ್ರಾಹಕರ ಇಚ್ಛೆಗೆ ತಕ್ಕಂತ ಉತ್ತಮ ಆಭರಣ ಪರಿಚಯಿಸಿದ್ದು ಮಾತ್ರವಲ್ಲದೆ, ತನ್ನ ನಿಷ್ಠಾವಂತ ಗ್ರಾಹಕರ ನೆಲೆಯಾಗಿ ಮೆಚ್ಚುಗೆ ಪಡೆದಿದೆ. ಜ್ಯುವೆಲರಿ ಅಂಗಡಿಗಿಂತ ಹೆಚ್ಚಿನದ್ದಾಗಿ ತನ್ನ ನಾಲ್ಕು ದಶಕಗಳ ಕಥೆಯನ್ನೂ ಹೊಂದಿರುವ ಅಭರಣ, ಕುಟುಂಬದ ಇತಿಹಾಸಗಳು, ಆಚರಣೆಗಳು ಮತ್ತು ಪರಂಪರೆಯಿಂದ ಹೆಣೆಯಲ್ಪಟ್ಟ ಹೆಸರಾಗಿದೆ. ಪ್ರವೃತ್ತಿಗಳನ್ನು ಮೀರಿ 5ನೇ ದಶಕಕ್ಕೆ ಕಾಲಿಡುತ್ತಿರುವ ಅಭರಣದ ಒಡವೆಗಳು ಸರ್ವ ಕಾಲಕ್ಕೂ ಹೊಳೆಯುತ್ತಲೇ ಇರುತ್ತವೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.
ಈ ಸಂದರ್ಭದಲ್ಲಿ ಅಭರಣ ಜ್ಯುವೆಲರ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರತಾಪ್ ಮಧುಕರ್ ಕಾಮತ್ ಮಾತನಾಡಿ, "ನನ್ನ ತಂದೆ ಉಡುಪಿಯಿಂದ ಬೆಂಗಳೂರಿಗೆ ಈ ಶಾಖೆಯನ್ನು ತೆರೆಯಲು ಬಂದಿದ್ದರು. ಇಂದು, ನಾವು ಎಂ.ಜಿ. ರಸ್ತೆಯಲ್ಲಿರುವ ಅತ್ಯಂತ ಹಳೆಯ ಆಭರಣ ಮಳಿಗೆ ಎನಿಸಿದ್ದೇವೆ. ಇಂದು ನನ್ನ ಮಗಳು ಸಂಯುಕ್ತಾ ಈ ವ್ಯವಹಾರಕ್ಕೆ ಕಾಲಿಡುತ್ತಿರುವುದನ್ನು ನೋಡುವುದು ನಂಬಲಾಗದಷ್ಟು ತೃಪ್ತಿಕರವಾಗಿದೆ. ನಮಗೆ, ಇಲ್ಲಿನ 40 ವರ್ಷಗಳು ಎಂದರೆ ಇಡೀ ಜಗತ್ತು" ಎಂದು ತಿಳಿಸಿದರು.
"ನನ್ನ ಮಗಳು ಅಮೆರಿಕದಲ್ಲಿ ತನ್ನ ಅಧ್ಯಯನ ಮುಗಿಸಿ ಇತ್ತೀಚೆಗೆ ಹಿಂದಿರುಗಿದ್ದಾರೆ. ಅವರು ನಮ್ಮ ಆಭರಣ ಬ್ರಾಂಡ್ಗೆ ಹೊಸ ಅಧ್ಯಾಯವಾಗಿ ಪ್ರತಿನಿಧಿಸುತ್ತಾರೆ. ಸಂಯುಕ್ತಾ ಪ್ರಕಾರ 'ಭಾರತೀಯ ಆಭರಣಗಳು ಕೇವಲ ಅಲಂಕಾರಿಕವಲ್ಲ. ಅವು ನಮ್ಮ ಇತಿಹಾಸ, ಪುರಾಣ ಮತ್ತು ಕರಕುಶಲತೆಯನ್ನು ಒಳಗೊಂಡಿವೆ. ಆದರೆ, ನಾವು ಅವುಗಳನ್ನು ಹೇಗೆ ಇಂದಿನ ಗ್ರಾಹಕರಲ್ಲಿ ಮುಂದೆ ಪ್ರಸ್ತುತಪಡಿಸುತ್ತೇವೆ' ಎಂಬುದು ಅವರ ಅಭಿಪ್ರಾಯ" ಎಂದರು.
"ನಾನು 25 ವರ್ಷಗಳ ಹಿಂದೆ ವ್ಯವಹಾರಕ್ಕೆ ಇಳಿದಾಗ, ಕುಟುಂಬದ ಎಲ್ಲ ಹೆಣ್ಣುಮಕ್ಕಳು ಒಂದೇ ರೀತಿ ಆಭರಣ ವಿನ್ಯಾಸವನ್ನು ಆರಿಸಿಕೊಳ್ಳುತ್ತಿದ್ದರು. ಇಂದು ಪ್ರತಿ ಮಹಿಳೆ ತಾನು ಬಯಸಿದ, ತನಗಿಷ್ಟವಾದ ಹಾಗೂ ಸರಿಹೊಂದುವ ಆಭರಣವನ್ನು ತನ್ನದಾಗಿಸಿಕೊಳ್ಳಲು ಇಚ್ಛಿಸುತ್ತಾರೆ. ಆದ್ದರಿಂದ ನಾವು ಪ್ರಸ್ತುತ ಕರಕುಶಲತೆಯ ಸಾರವನ್ನು ಕಳೆದುಕೊಳ್ಳದೆ, ಪ್ರತ್ಯೇಕ ಹಾಗೂ ವಿಭಿನ್ನ ಅಭಿರುಚಿಯ ಮೇಲೆ ಕೇಂದ್ರೀಕರಿಸುತ್ತೇವೆ" ಎಂದು ಹೇಳಿದರು.
ಮುಂದುವರೆದು, "ನಂಬಿಕೆ, ಕರಕುಶಲತೆಯ ಪರಂಪರೆಯ ಬಗ್ಗೆ ಹೆಚ್ಚಿನ ಒತ್ತು ನೀಡಿರುವ ನಾವು, ಹಿಂದೆ ಹಾಲ್ಮಾರ್ಕ್ ಅಥವಾ ಸರ್ಟಿಫಿಕೇಷನ್ ಯಾವುದೇ ಇರಲಿಲ್ಲ. ಕೇವಲ ನಂಬಿಕೆ ಮೇಲೆ ವ್ಯವಹಾರ ನಡೆಯುತ್ತಿತ್ತು. ಜನರು ಅಭರಣ್ನಲ್ಲಿ ಪ್ರಾಮಾಣಿಕ ಮೌಲ್ಯ ಸಿಗುತ್ತದೆ ಎಂಬ ವಿಶ್ವಾಸ ಹೊಂದಿರುತ್ತಿದ್ದರು. ನಾವು ಅದಕ್ಕೆ ಬದ್ಧರಾಗಿ ಕೆಲಸ ಮಾಡುತ್ತಿದ್ದೇವು. ಅದು ಇಂದು ನಮ್ಮನ್ನು ಈ ಮಟ್ಟಕ್ಕೆ ಕೊಂಡೊಯ್ದಿದೆ" ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇತರ ನಗರಗಳಿಗೂ ವಿಸ್ತರಿಸುವ ಯೋಚನೆ: ಸಂಯುಕ್ತಾ ಈ ವೇಳೆ ಮಾತನಾಡಿದ ಸಂಯುಕ್ತಾ ಅವರು, "ಆಭರಣ ಇತರ ನಗರಗಳಿಗೆ ವಿಸ್ತರಿಸಲು ನಾವು ಯೋಚಿಸುತ್ತಿದ್ದೇವೆ. ಇದೇ ಸಮಯದಲ್ಲಿ ಮತ್ತಷ್ಟು ವಿಶೇಷವಾಗಿಸುವ ಆಭರಣ ವಿನ್ಯಾಸಗಳು, ಗುಣಮಟ್ಟ ಮತ್ತು ಸೇವೆ ನೀಡಲು ನಿಷ್ಠರಾಗಿದ್ದೇವೆ. ನನ್ನ ಅಜ್ಜ ಮತ್ತು ನನ್ನ ತಂದೆಯಿಂದಾಗಿ ನಮಗೆ ಅದ್ಭುತ ಪರಂಪರೆ ಬಂದಿದೆ. ಈಗ, ಭಾರತೀಯ ವಿನ್ಯಾಸಗಳು, ವಿಶೇಷವಾಗಿ ವಜ್ರ ಮತ್ತು ಸಾಂಪ್ರದಾಯಿಕ ತುಣುಕುಗಳು ಸಮಕಾಲೀನ ಶೈಲಿಯೊಂದಿಗೆ ಹೇಗೆ ಸುಂದರವಾಗಿಸಬಹುದು. ಗ್ರಾಹಕರ ಮುಂದೆ ಹೇಗೆ ಪ್ರಸ್ತುತ ಪಡಿಸುವುದು ಎಂಬುದು ನಮ್ಮ ಮುಂದಿರುವ ಸವಾಲಾಗಿದೆ" ಎಂದರು.
ಸಂಭ್ರಮಾಚರಣೆ ಹಿನ್ನೆಲೆ ಮೇಕಿಂಗ್ ಚಾರ್ಜ್ಗಳಲ್ಲಿ 40%ವರೆಗೆ ರಿಯಾಯಿತಿ ಈ ಮೈಲಿಗಲ್ಲಿನ ಸಂಭ್ರಮ ವರ್ಷಕ್ಕಾಗಿ, ಆಭರಣ ಮಳಿಗೆ ಜು. 25 ರಿಂದ 31 ರವರೆಗೆ ಎಂ.ಜಿ. ರಸ್ತೆಯ ಶೋ ರೂಂನಲ್ಲಿ ಒಂದು ವಾರದ ವಿಶೇಷ ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಮೇಕಿಂಗ್ ಚಾರ್ಜ್ಗಳಲ್ಲಿ 40% ವರೆಗೆ ರಿಯಾಯಿತಿ ನೀಡುತ್ತಲಿದೆ.