ಬಂಟ್ವಾಳ, ಜು. 18 (DaijiworldNews/AA): ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಕೆ. ಗೋವಿಂದಾರಾಜು ಇವರ ಅನುದಾನದಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಿಲಾತಬೆಟ್ಟು ಗ್ರಾಮದ ಮೂರ್ಜೆ ಜಂಕ್ಷನ್ ನಲ್ಲಿ ನಿರ್ಮಾಣವಾದ ನವೀಕೃತ ಮೂರ್ಜೆ ರಿಕ್ಷಾ ನಿಲ್ದಾಣ ಇದರ ಉದ್ಘಾಟನೆಯನ್ನು ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರು ನೆರವೇರಿಸಿ ಶುಭ ಹಾರೈಸಿದರು.



ಮೂರ್ಜೆ ಪರಿಸರದಲ್ಲಿ ಸುಮಾರು 40 ವರ್ಷದಿಂದ ರಸ್ತೆ ಬದಿಯಲ್ಲಿ ನಿಲ್ಲಿಸುತ್ತಿದ್ದ ಆಟೋಗಳಿಗೆ ಸರಿಯಾದ ಸೂರಿನ ವ್ಯವಸ್ಥೆಯ ನಿಲ್ದಾಣ ಗುರುವಾರ ಬೆಳಿಗ್ಗೆ 11 ಗಂಟೆಗೆ ಲೋಕಾರ್ಪಣೆಗೊಂಡಿತು. ಮಾಜಿ ಸಚಿವರಾದ ಬಿ. ರಾಮನಾಥ ರೈ ಅವರು ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿದರು. ಎಂಎಲ್ಸಿ ಗೋವಿಂದರಾಜು ಅವರ ಅನುದಾನದಲ್ಲಿ ಅಚ್ಚುಕಟ್ಟಾದ ಆಟೋ ನಿಲ್ದಾಣ ಉದ್ಘಾಟನಾ ಭಾಷಣ ಮಾಡಿದ ಬಿ. ರಮನಾಥ ರೈ ಅವರು ಮಾತನಾಡಿ ನನ್ನಿಂದ ಎಷ್ಟು ಸಾಧ್ಯವು ಅಷ್ಟು ಸಮಾಜಮುಖಿ ಕೆಲಸವನ್ನು ಇನ್ನು ಮುಂದೆಯೂ ಮಾಡುತ್ತೇನೆ. ಸಮಾಜಕ್ಕಾಗಿ, ಸಮಾಜದ ಒಳಿತಿಗಾಗಿ ಯಾವತ್ತು ನಾನು ಹಿಂಜರಿಯುವುದಿಲ್ಲ ಎಂದರು. ಪುಂಜಾಲಕಟ್ಟೆ ಬಿಸಿ ರೋಡು, ರಾಷ್ಟ್ರೀಯ ಹೆದ್ದಾರಿ ನನ್ನ ವಿಶೇಷ ಮುತುವರ್ಜಿಯಲ್ಲಿ ಆಯಿತು. ಶಾಸಕನಾಗಿ ಆಯ್ಕೆಯಾಗಿಲ್ಲವಾದರೂ ನಿಮ್ಮೊಂದಿಗೆ ಕಾರ್ಯಕರ್ತರಿಗೆ ಸದಾ ಇರುವೆನು ಎಂದರು.
ಬುಡ ಅಧ್ಯಕ್ಷರಾದ ಬೇಬಿ ಕುಂದರ್ ಅವರು ಮಾತನಾಡಿ, ಈ ಆಟೋ ನಿಲ್ದಾಣಕ್ಕೆ ಹಲವು ಸ್ಥಳೀಯ ನಾಯಕರು ವಿರೋಧಿಸಿದರೋ ಕಾಂಗ್ರೆಸ್ ಕಾರ್ಯಕರ್ತರ ಒಗ್ಗಟಿನ ಫಲವಾಗಿ ಕೆಲಸ ಸಂಪೂರ್ಣವಾಗಿ ಇಂದು ಉದ್ಘಾಟನೆಗೊಂಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ಅಭಿನಂದಿಸಿದರು. ಕಾಂಗ್ರೆಸ್ ಪಕ್ಷವು ಹಾಗೂ ಸಿದ್ದರಾಮಯ್ಯ ಸರ್ಕಾರವು ಸದಾ ಜನರ ಒಳಿತಿಗಾಗಿ ದುಡಿಯುತ್ತಿದೆ ಎಂದರು. ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಲವೀನ ಮೊರಾಸ್ ರವರು ಎಲ್ಲಾ ರಿಕ್ಷಾ ಚಾಲಕರು ಹಾಗೂ ಮಾಲಕರನ್ನು ಅಭಿನಂದಿಸಿದರು ಹಾಗೂ ಇನ್ನು ಮುಂದೆಯೂ ನಿಮ್ಮಲ್ಲಿ ಇಂತಹ ಒಗ್ಗಟ್ಟು ಗಟ್ಟಿಯಾಗಿ ಸಮಾಜದ ಒಳಿತಿಗಾಗಿ ದುಡಿಯಬೇಕೆಂದರು. ರಿಕ್ಷಾ ಚಾಲಕರ ಅಧ್ಯಕ್ಷರು ವಸಂತ ಹೆಗಡೆ ಮಾತನಾಡಿ ಆಟೋ ನಿಲ್ದಾಣಕ್ಕೆ ಶ್ರಮ ಪಟ್ಟ ಎಲ್ಲರನ್ನೂ ಅಭಿನಂದಿಸಿದರು.
ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದಿಂದ ಶ್ರೀ ಬಿ ರಾಮನಾಥ ರೈ ಹಾಗೂ ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ದಿನೇಶ್ ರೈ ಅವರನ್ನು ಸನ್ಮಾನಿಸಿದರು. ಪಿಲಾತಬೆಟ್ಟು ಪಂಚಾಯತ್ ಸದಸ್ಯರಾದ ನೆಲ್ವಿಸ್ಟರ್ ಪಿಂಟೊ ರವರು ಎಲ್ಲರನ್ನು ಸ್ವಾಗತಿಸಿದರು. ಲಾರೆನ್ಸ್ ಡಿಸೋಜರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಲಕೃಷ್ಣ ಅಂಚನ್, ಸುಧಾಕರ್ ಶನೈ ಖಂಡಿಗ, ಬಂಟ್ವಾಳ ಬ್ಲಾಕ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶೇಕ್ ರಾಮತುಲ್ಲ, ಪಿಲಾತಬೆಟ್ಟು ವಲಯ ಕಾಂಗ್ರೆಸ್ ಅಧ್ಯಕ್ಷರಾದ ವಿಕ್ಟರ್ ಡಿಸೋಜಾ, ಇರ್ವತ್ತೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ನಜೀರ್ ಸಾಹೇಬ್, ಪಂಚಾಯತ್ ಸದಸ್ಯರಾದ ಸುಧೀಂದ್ರ ಶೆಟ್ಟಿ, ಪ್ರಶಾಂತ್ ಜೈನ್, ಪುಷ್ಪಾಲತ ಸಾಲಿಯನ್, ವಿಜಯ, ವನಿತಾ, ಲೀಲಾವತಿ ಶೆಟ್ಟಿ, ಬಂಟ್ವಾಳ ಕಿಶನ್ ಸಮಿತಿಯ ಸದಸ್ಯರಾದ ಕಿಶೋರ್ ರೊಡ್ರಿಗಸ್, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಕುಮಾರ್, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಜ್ವಲ್ ಶೆಟ್ಟಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸದಸ್ಯರಾದ ಮೋಹನ್ ಸಾಲಿಯನ್, ಬೂತ್ ಅಧ್ಯಕ್ಷರಾದ ವಿಟ್ಟಲಶೆಟ್ಟಿ, ಪಿಲಾತಬೆಟ್ಟು ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅರುಣ್ ಫರ್ನಾಂಡಿಸ್, ಪ್ರಮುಖರಾದ ವನದುರ್ಗ ದೇವಸ್ಥಾನ ಅಧ್ಯಕ್ಷರಾದ ಮೋಹನ್ ಹೆಗಡೆ, ಸ್ಥಳೀಯ ಉದ್ಯಮಿ ನಾಗೇಶ್ ಪ್ರಭು, ಅಂಬ್ರೋಜ್ ಮೋರಸ್, ರಿಕ್ಷಾ ಚಾಲಕರು ಹಾಗೂ ಮಾಲಕರು ಉಪಸ್ಥಿತರಿದ್ದರು.