ಮಂಗಳೂರು, ಜು. 18 (DaijiworldNews/AA): ಮಂಗಳೂರಿನ ಕುಳೂರು ಸೇತುವೆ ಸಮೀಪದ ರಸ್ತೆಯು ಬೃಹತ್ ಹೊಂಡಗಳಿಂದ ಕೂಡಿದ್ದು, ವಾಹನಸವಾರರು ಸಂಕಷ್ಟ ಎದುರಿಸುವಂತಾಗಿದೆ. ಪ್ರತಿ ವರ್ಷವೂ ಮುಂಗಾರು ಮಳೆಯಲ್ಲಿ, ಈ ರಸ್ತೆಯು ಮತ್ತಷ್ಟು ಹದಗೆಟ್ಟು, ಪಣಂಬೂರಿನವರೆಗೂ ಟ್ರಾಫಿಕ್ ಜಾಮ್ ಉಂಟಾಗುತ್ತದೆ.























ಪಣಂಬೂರಿನಿಂದ ಮಂಗಳೂರಿಗೆ ಪ್ರಯಾಣಿಸುವಾಗ ಕುಳೂರು ಸೇತುವೆ ತಲುಪುವ ಮೊದಲೇ ವಾಹನ ಸವಾರರಿಗೆ ಬೃಹತ್ ಗುಂಡಿಗಳು ಎದುರಾಗುತ್ತದೆ. ಈ ದೊಡ್ಡ ಗುಂಡಿಗಳು ವಾಹನ ಸವಾರರಿಗೆ ಗಂಭೀರ ಅಪಾಯವನ್ನುಂಟುಮಾಡುತ್ತಿದ್ದು, ಈ ರಸ್ತೆಯಲ್ಲಿ ಈಗಾಗಲೇ ಹಲವಾರು ಅಪಘಾತಗಳು ಮತ್ತು ಸಾವುಗಳು ಸಂಭವಿಸಿವೆ.
ಈ ರಸ್ತೆಯಲ್ಲಿ ವಾಹನಸವಾರರು ಪ್ರಾಣವನ್ನು ಪಣಕ್ಕಿಟ್ಟು ವಾಹನವನ್ನು ಚಲಾಯಿಸಬೇಕಾಗುತ್ತದೆ. ಈ ಬಗ್ಗೆ ಸ್ಥಳೀಯರು ಮತ್ತು ಪ್ರಯಾಣಿಕರು ದೂರಿದರೂ, ಸಮಸ್ಯೆ ಬಗೆಹರಿದಿಲ್ಲ. ಈ ರಸ್ತೆಯ ನಿರ್ವಹಣೆಗೆ ಜವಾಬ್ದಾರರಾಗಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಮುಂಗಾರು ಆರಂಭವಾಗುವ ಮೊದಲೇ ರಸ್ತೆಯನ್ನು ದುರಸ್ತಿಪಡಿಸಲು ಸಕಾಲಿಕ ಕ್ರಮ ಕೈಗೊಳ್ಳಬೇಕಿತ್ತು.
ಕೆಲಸಗಾರರು ಸ್ಥಳದಲ್ಲಿ ತೇಪೆ ಕಾರ್ಯ ನಡೆಸುತ್ತಿರುವುದು ಕಂಡುಬಂದೆ. ಆದರೆ ಈ ತಾತ್ಕಾಲಿಕ ರಿಪೇರಿಯು ಪರಿಣಾಮಕಾರಿತ್ವ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆಯೇ ಎಂದು ಪ್ರಶ್ನೆಯಾಗಿದೆ.
ಯಾವುದೇ ಸರಿಯಾದ ರಿಪೇರಿ ಅಥವಾ ಸುರಕ್ಷತಾ ಕ್ರಮಗಳಿಲ್ಲದೆ, ರಸ್ತೆಗುಂಡಿಗಳು ಸಾವಿನ ಗುಂಡಿಗಳಾಗಿ ಮಾರ್ಪಟ್ಟಿವೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಈ ಪ್ರಮುಖ ಮಾರ್ಗದಲ್ಲಿ ವಾಹನ ದಟ್ಟಣೆ ಮತ್ತು ಸಾವುನೋವುಗಳನ್ನು ತಡೆಗಟ್ಟಲು ತುರ್ತು ಮತ್ತು ಶಾಶ್ವತ ಪರಿಹಾರದ ಅಗತ್ಯವಿದೆ.