ಬಂಟ್ವಾಳ, ಜು. 18(DaijiworldNews/AK):ತಾಲೂಕಿನ ವೀರಕಂಭ ಗ್ರಾಮದ ಕುಮೇರು ಎಂಬಲ್ಲಿನ ಕಾಲು ಸಂಕದ ಬದಿಗೆ ಕಟ್ಟಿದ ತಡೆಗಡೆಯು ವಿಪರೀತ ಮಳೆಗೆ ಜರಿದಿದ್ದು ಅಪಾಯದ ಸ್ಥಿತಿಯಲ್ಲಿದೆ.


ವೀರಕಂಭದಿಂದ ಕುಮೇರು, ಕೆಮ್ಮಟೆ, ಲಾಡ, ಸಿಂಗೇರಿ,, ಕಿನ್ನಿ ಮೂಲೆ, ಗುಡ್ಡೆ ತೋಟ ಪ್ರದೇಶದ ನಿವಾಸಿಗಳು ಈ ದಾರಿಯನ್ನೇ ಅವಲಂಬಿತರಾಗಿದ್ದಾರೆ. ದಿನ ನಿತ್ಯ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಈ ಕಾಲು ಸಂಕದ ಮೇಲಿಂದಲೇ ನಡೆದುಕೊಂಡು ಬರುವುದರಿಂದ ಅಪಾಯ ಸಂಭವಿಸುವ ಮೊದಲೇ ಇದರ ತುರ್ತು ರಿಪೇರಿ ಮಾಡಬೇಕೆಂದು ಗ್ರಾಮಸ್ಥರು ಆಗ್ರಹವಾಗಿದೆ.