ಕಾಸರಗೋಡು, ಜು. 17(DaijiworldNews/TA): ಚಲಿಸುತ್ತಿದ್ದ ಅಟೋ ರಿಕ್ಷಾ ಮೇಲೆ ಭಾರೀ ಗಾತ್ರದ ಮರ ಬಿದ್ದ ಘಟನೆ ಗುರುವಾರ ಬೆಳಿಗ್ಗೆ ಮುಳ್ಳೇರಿಯ - ಆದೂರು ರಸ್ತೆಯ ಅಲಂತಡ್ಕದಲ್ಲಿ ನಡೆದಿದೆ. ಓರ್ವ ಗಾಯಗೊಂಡಿದ್ದು, ಆಟೋರಿಕ್ಷಾ ನಜ್ಜು ಗುಜ್ಜಾಗಿದೆ.

ಆದೂರು ಸಿ. ಎ ನಗರದ ಅಬ್ದುಲ್ ಕುಂಞಿ ಗಾಯಗೊಂಡವರು. ಇವರನ್ನು ಮುಳ್ಳೇರಿಯಾ ದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮರವನ್ನು ಕಡಿದು ತೆರವುಗೊಳಿಸಿದರು.