ಬಂಟ್ವಾಳ, ಜು. 13 (DaijiworldNews/AK): ತುಂಬೆಯ ಕಾವ್ಯ. ಕೆ. ನಾಯಕ್ ಇವರು ಐಐಎಸ್ಸಿನ ಅಂತರ್ಶಿಸ್ತಿನ ವಿಜ್ಞಾನ ವಿಭಾಗದ ಡೀನ್ ಹಾಗೂ ನ್ಯಾನೋ ಸೈನ್ಸ್ ಮತ್ತು ಇಂಜಿನಿಯರಿಂಗ್ ಕೇಂದ್ರದ ಪ್ರಾಧ್ಯಾಪಕ ಪ್ರೊ. ನವಕಾಂತ್ ಭಟ್ ಅವರ ಮಾರ್ಗದರ್ಶನದಲ್ಲಿ “ಎಲೆಕ್ಟ್ರೋಕೆಮಿಕಲ್ ಕಂಟಿನ್ಯುವಸ್ ಗ್ಲುಕೋಸ್ ಮಾನಿಟರಿಂಗ್ ಸೆನ್ಸೋರ್ಸ್ ಫಾರ್ ಎಫೆಕ್ಟಿವ್ ಮ್ಯಾನೇಜ್ಮೆಂಟ್ ಆಫ್ ಡಯಾಬಿಟಿಸ್” ಎಂಬ ವಿಷದ ಕುರಿತಾಗಿ ಮಂಡಿಸಿದ ಮಹಾಪ್ರಬಂಧಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಈ ಮಹತ್ವದ ಸಂಶೋಧನೆ ಡಯಾಬಿಟಿಸ್ ನಿಖರ ನಿರ್ವಹಣೆಗೆ ಸಹಾಯ ಮಾಡುವ ಎಲೆಕ್ಟ್ರೋಕೆಮಿಕಲ್ ತಂತ್ರಜ್ಞಾನಾಧಾರಿತ ನಿರಂತರ ಗ್ಲುಕೋಸ್ ಮಾನಿಟರಿಂಗ್ ಸೆನ್ಸೋರ್ ಅಭಿವೃದ್ಧಿಯ ಬಗ್ಗೆ ಆಳವಾದ ಅಧ್ಯಯನವನ್ನು ಒಳಗೊಂಡಿದೆ.
ಇವರು ತುಂಬೆಯ ರೂಪ ಮತ್ತು ಕೆ. ಕೃಷ್ಣ ನಾಯಕ್ ದಂಪತಿಯ ಪುತ್ರಿಯಾಗಿದ್ದು, ಮಂದರ್ಕೆಯ ಗಿರೀಶ್ ಎನ್. ಪೈ ಅವರ ಧರ್ಮಪತ್ನಿ, ಬೆಂಗಳೂರು ನಗರದ ಆರ್ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.