ಉಡುಪಿ, ಜು. 12 (DaijiworldNews/AA): ಹೆಬ್ರಿ ತಾಲೂಕಿನ ಹಲವೆಡೆ ಮತ್ತೆ ಆನೆ ದಾಳಿ ಮುಂದುವರೆದಿದೆ.





ಹೆಬ್ರಿ ತಾಲೂಕಿನ, ನಾಡ್ಪಾಲು ಗ್ರಾಮದ, ತಿಂಗಳೆ ಎಂಬುವಲ್ಲಿ ಮನೋರಮಾ ಎಸ್ ಶೆಟ್ಟಿ ತೋಟಕ್ಕೆ ಅಡಿಕೆ ತೋಟಕ್ಕೆ ನುಗ್ಗಿ ಆನೆ ಸತತ ಎರಡನೇ ದಿನ ದಾಳಿ ಮಾಡಿ ಸುಮಾರು 60 ಕ್ಕೂ ಹೆಚ್ಚು ಅಡಿಕೆ ಮರಗಳನ್ನು ನಾಶ ಮಾಡಿರುತ್ತದೆ.
ನಿರಂತರ ಎರಡನೇ ದಿನ ಆನೆ ದಾಳಿ ನಡೆದಿದ್ದು, ಹಲವಾರು ತೆಂಗಿನ ಮರ, ಅಡಿಕೆ ತೋಟಗಳಿಗೆ ಆನೆ ದಾಳಿಯಿಂದ ಹಾನಿ ಉಂಟಾಗಿದೆ. ತಕ್ಷಣವೇ ಈ ಕುರಿತು ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.