ಮಂಗಳೂರು, ,ಜು. 12 (DaijiworldNews/AK): ಸುರತ್ಕಲ್ನ ಎಂಆರ್ಪಿಎಲ್ನಲ್ಲಿ ಟ್ಯಾಂಕ್ ಪ್ಲಾಟ್ಫಾರ್ಮ್ ನಲ್ಲಿ ಅನಿಲ ಸೋರಿಕೆ ಹಿನ್ನಲೆ ಹಿರಿಯ ನಿರ್ವಾಹಕರು ಇಬ್ಬರು ಸಾವನ್ನಪ್ಪಿದ್ದ ಘಟನೆ ನಡೆದಿದೆ.

ಮೃತರು ಎಂಆರ್ಪಿಎಲ್ನ ಅನುಭವಿ ನಿರ್ವಾಹಕರು, ಪ್ರಯಾಗ್ರಾಜ್ನ ದೀಪ್ ಚಂದ್ರ (33) ಮತ್ತು ಕೇರಳದ ಬಿಜಿಲ್ ಪ್ರಸಾದ್ (33) ಎಂದು ಗುರುತಿಸಲಾಗಿದೆ. ಇನ್ನು ರಕ್ಷಣೆಗೆ ಹೋದ ಗದಗದ ವಿನಾಯಕ್ ಎಂಬುವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ.
ಎಂಆರ್ಪಿಎಲ್ನಲ್ಲಿ ಟ್ಯಾಂಕ್ ಪ್ಲಾಟ್ಫಾರ್ಮ್ ಮೇಲೆ ಹಿರಿಯ ನಿರ್ವಾಹಕರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದರು. ಅವರನ್ನು ರಕ್ಷಿಸಿ ಶ್ರೀನಿವಾಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆಯ ಸಮಯದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಸಣ್ಣ ಪ್ರಮಾಣದ ಎಚ್2ಎಸ್ ಅನಿಲ ಸೋರಿಕೆ ಕಂಡುಬಂದಿದೆ ಮತ್ತು ಕಾರ್ಮಿಕರು ಮಾಸ್ಕ್ ಧರಿಸಿ ತಮ್ಮ ನಿಯಮಿತ ಕರ್ತವ್ಯದ ಭಾಗವಾಗಿ ಅದನ್ನು ಪರಿಶೀಲಿಸುವಾಗ ಆ ಅನಿಲವನ್ನು ಉಸಿರಾಡಿದ್ದಾರೆ. ಈ ವೇಳೆ ಘಟನೆ ಸಂಭವಿಸಿದೆ.
ಎಂಆರ್ಪಿಎಲ್ ಅಗ್ನಿಶಾಮಕ ಮತ್ತು ಸುರಕ್ಷತಾ ತಂಡ ಸೋರಿಕೆಯನ್ನು ಸರಿಪಡಿಸಿದೆ ಮತ್ತು ಈಗ ಅದು ಸರಿಯಾಗಿದೆ ಎಂದು ಅವರು ಹೇಳಿದರು. ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಲು ಎಂಆರ್ಪಿಎಲ್, ಗ್ರೂಪ್ ಜನರಲ್ ಮ್ಯಾನೇಜರ್ಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಸಂಬಂಧಿತ ಶಾಸನಬದ್ಧ ಅಧಿಕಾರಿಗಳಿಗೆ ಸಹ ತಿಳಿಸಲಾಗಿದೆ.