ಉಡುಪಿ, ಜು. 11 (DaijiworldNews/AK):ಕಥೋಲಿಕ್ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಮಲ್ಪೆ ಶಾಖೆಯ ನವೀಕೃತ ಕಟ್ಟಡ ಉದ್ಘಾಟನಾ ಸಮಾರಂಭವು ಮಲ್ಪೆಯ ಸಿಟಿಜನ್ ಸರ್ಕಲ್ನ ಪ್ರಥಮ ಮಹಡಿಯಲ್ಲಿ ಜುಲೈ ೧೦ರಂದು ನಡೆಯಿತು.


ಕೊಡವೂರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್ ಅವರು ಕಚೇರಿ ಉದ್ಘಾಟಿಸಿದರು ಬಳಿಕ ಸಂತ ಅನ್ನಮ್ಮ ಚರ್ಚ್, ತೊಟ್ಟಂ ಧರ್ಮಗುರುಗಳು ವಂದನೀಯ ಫಾ ಡೆನಿಸ್ ಡೇಸಾ ಆಶೀರ್ವಚನ ನೀಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಸಿ.ಎಸ್.ಐ. ಎಬೆಜ್ಜರ್ ಚರ್ಚ್, ಮಲ್ಪೆಯ ಧರ್ಮ ಗುರುಗಳು, ರೆ।। ವಿನಯ್ ಸಂದೇಶ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ನಾನು ಬ್ಯಾಂಕಿನ ಎಲ್ಲಾ ಸಿಬ್ಬಂದಿ ಮತ್ತು ಗ್ರಾಹಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದು ನವೀಕರಿಸಲಾದ ಶಾಖೆಯಾಗಿದ್ದು, ಮಲ್ಪೆ ಜನರ ಲಾಭಕ್ಕಾಗಿ ಎಲ್ಲವನ್ನೂ ನವೀಕರಿಸಲಾಗಿದೆ. ಕಥೋಲಿಕ್ ಕ್ರೆಡಿಟ್ ಸೊಸೈಟಿ ಒಂದು ಸಾಮಾಜಿಕ ಸೇವಾ ಸಂಸ್ಥೆಯಾಗಿದೆ ಮತ್ತು ಇದರ ಸೇವೆ ಮಲ್ಪೆ ಜನರಿಗೆ ಬಹಳ ಪ್ರಯೋಜನಕಾರಿಯಾಗಿದೆ. ನಾವು ಎಲ್ಲರೂ ಸಿಇಒ ಸಂದೀಪ್ ಮತ್ತು ಸಂಸ್ಥೆಗೆ ಬೆಂಬಲ ನೀಡುತ್ತೇವೆ ಎಂದರು.
ಲೂವಿಸ್ ಲೋಬೊ ಶಾಖಾ ವ್ಯವಸ್ಥಾಪಕರಾದ ಜೆನೆಟ್ ಡಿ'ಸೋಜ,ಅಬೂಬಕ್ಕರ್ ಸಿದ್ದಿಕ್ ಜಾಮೀಯ ಮಸೀದಿ, ಮಲ್ಪೆ ಅಧ್ಯಕ್ಷರಾದ ಮಹಮ್ಮದ್ ನಕ್ವಾಯಾಹ್ಯಾ , ಮಲ್ಪೆ ಸೆಂಟ್ರಲ್ ವಾರ್ಡ್ ಕೌನ್ಸಿಲರ್, ಎಡ್ಲಿನ್ ಕರ್ಕಡ, ಮತಗಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.