ಮಂಗಳೂರು,, ಜು. 09 (DaijiworldNews/AK): ಮಂಗಳೂರಿನ ವೆನ್ಲಾಕ್ ಅಸ್ಪತ್ರೆಗೆ ಎಂ.ಆರ್.ಪಿ.ಎಲ್ ಸಂಸ್ಥೆ ಸಾಕಷ್ಠು ಕೊಡುಗೆ ನೀಡಿದೆ, ಕೊರೋನಾ ಸಂದರ್ಭ ಆಕ್ಸಿಜನ್ ಕೊರತೆ ಇದ್ದಾಗ ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸಂಸ್ಥೆ ಮಾಡಿದೆ ಎಂದು ಎಂ.ಆರ್.ಪಿ.ಎಲ್ ನ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಹೇಳಿದರು.










ಅವರು ಮಂಗಳೂರಿನ ವೆನ್ಲಾಕ್ ಸರಕಾರಿ ಅಸ್ಪತ್ರೆಯಲ್ಲಿ ತಲೆ ಸಿಮಿಯಾ ರೋಗದಿಂದ ದಾಖಲಾದ ರೋಗಿಗಳಿಗೆ ಎಂ.ಆರ್.ಪಿ.ಎಲ್ ವತಿಯಿಂದ ನ್ಯೂಟ್ರಿಶಿಯನ್ ಬಾರ್ ನೀಡಿ ಮಾತನಾಡಿ ಅರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು ಎಂಬ ದೃಷಿಯಿಂದ ಪ್ರತೀ ವರ್ಷ ಸಂಸ್ಥೆ ವತಿಯಿಂದ ಸಹಕಾರ ನೀಡುತ್ತಿದ್ದೇವೆ ಎಂದರು.
ಈ ಸಂದರ್ಭ ಸುಮಾರು ೧೦೦ ರೋಗಿಗಳಿಗೆ ನ್ಯೂಟ್ರಿಶಿಯನ್ ಬಾರ್ ನೀಡಲಾಯಿತು. ಈ ಸಂದರ್ಭ ಎಂ.ಆರ್.ಪಿ.ಎಲ್ ನ ಕೇಶವ ಪಾಟಾಳಿ, ವೆನ್ಲಾಕ್ ಅಸ್ಪತ್ರೆಯ ದ.ಕ ಜಿಲ್ಲಾ ಸರ್ಜನ್ ಸುಪರಿಡೆಂಟ್ ಶಿವ ಪ್ರಕಾಶ್, ಆರ್.ಎಂ.ಒ ಡಾ ಸುಧಾಕರ್, ಸಂಯೋಜಕ ಡಾ ಶರತ್ ಕುಮಾರ್ ಉಪಸ್ಥಿತರಿದರು.