ಮಂಗಳೂರು, ಜು. 09 (DaijiworldNews/AK): ಸಹಕಾರಿ ಸಂಘಗಳು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ಮಿರಾಕಲ್ಸ್ ಮಿಲಾಗ್ರೆಸ್ ಮಾದರಿಯಾಗಿದೆ.



ಮಿರಾಕಲ್ಸ್ ಮಿಲಾಗ್ರೆಸ್ವತಿಯಿಂದ ವೆನ್ಲಾಕ್ ಅಸ್ಪತ್ರೆಯ ಸುಮಾರು 500ಕ್ಕೂ ಹೆಚ್ಚು ರೋಗಿಗಳ ಸಹವರ್ತಿಗಳಿಗೆ ಊಚಿತ ರಾತ್ರಿಯ ಊಟದ ವ್ಯವಸ್ಥೆ ಜೊತೆಗೆ ಬೇಯಿಸಿದ ಮೊಟ್ಟೆ ಹಾಗೂ ಪಾಯಸ ಒದಗಿಸುವ ಮೂಲಕ ಅನ್ನದಾನ ಮಾಡಲಾಯಿತು.
ಈ ಸೇವಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಮ್.ಎಮ್ ಫ್ರೆಂಡ್ಸ್ನ ಅಧ್ಯಕ್ಷರಾದ ಹನೀಫ್ ಹಾಜಿ ಭಾಗವಹಿಸಿದ್ದರು. ಲಯನ್ಸ್ ಹೈಲೆಂಡ್ ನ ನೂತನ ಅಧ್ಯಕ್ಷರಾದ ಶ್ರೀ ನವೀನ್ ನಾಯಕ್ ಹಾಗೂ ಸದಸ್ಯರು, ಮಿರಾಕಲ್ಸ್ ನ ಆಡಳಿತ ಮಂಡಳಿಯ ಅಧ್ಯಕ್ಷರು ಜ್ಯೂಸ್ ಪಾಲ್ ಬಿ.ವೇಗಸ್, ಸಂಸ್ಥೆಯ ಎಲ್ಲಾ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರಾದ ಮೊಹಮ್ಮದ್ ಇಕ್ಬಾಲ್ ಶೇಖ್, ಶಾಖಾ ವ್ಯವಸ್ಥಾಪಕರಾದ ಶ್ರೀ ಜೈಸನ್ ಆಲ್ವಿನ್ ಪಿಂಟೋ ಹಾಗೂ ಮಿರಾಕಲ್ಸ್ ಸಹಕಾರಿಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.