ಕಾಸರಗೋಡು,ಜೂ. 26 (DaijiworldNews/AK): ತಾಯಿಯನ್ನು ಕೊಲೆಗೈದ ಪ್ರಕರಣದ ಆರೋಪಿಯಾಗಿರುವ ಪುತ್ರ ನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವರ್ಕಾಡಿ ನಲ್ಲೆಂಗಿಯ ಹಿಲ್ಡಾ ಮೊಂತೆರೋ ರವರ ಪುತ್ರ ಮೆಲ್ವಿನ್ (33) ಬಂಧಿತ ಆರೋಪಿ. ಕೊಲ್ಲೂರಿನಿಂದ ಗುರುವಾರ ಮಧ್ಯಾಹ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೊಬೈಲ್ ಲೋಕೇಶನ್ ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಆರೋಪಿಯನ್ನು ಬಂಧಿಸಲಾಗಿದೆ. ಗುರುವಾರ ಮುಂಜಾನೆ ಘಟನೆ ನಡೆದಿತ್ತು. ಮಲಗಿದ್ದ ತಾಯಿ ಹಿಲ್ಡಾ ರವರ ನ್ನು ಕೊಲೆಗೈದು ಮನೆ ಸಮೀಪದ ಪೊದೆಗೆ ಎಸೆದಿದ್ದನು. ಮನೆಗೆ ಬಂದಿದ್ದ ನೆರೆಮನೆಯ ಲೋಲಿಟಾ ರವರನ್ನು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದು, ಲೋ ಲಿ ಟಾ
ಮೇಲೂ ಬೆಂಕಿ ಹಚ್ಚಿದ್ದನು.
ಕೃತ್ಯದ ಬಳಿಕ ಈತ ಆಟೋ ರಿಕ್ಷಾ ಮೂಲಕ ಹೊಸಂಗಡಿಗೆ ತಲುಪಿ ಅಲ್ಲಿಂದ ಬಸ್ಸು ಮೂಲಕ ಮಂಗಳೂರಿಗೆ ಆಗಮಿಸಿ ಅಲ್ಲಿಂದ ಕೊಲ್ಲೂರಿಗೆ ಪರಾರಿಯಾಗಿದ್ದನು..ಆರೋಪಿಯನ್ನು ಮಂಜೇಶ್ವರ ಕ್ಕೆ ಕರೆ ತರಲಾಗುತ್ತಿದ್ದು , ವಿಚಾರಣೆ ಬಳಿಕ ಹೆಚ್ಚಿನ ಮಾಹಿತಿ ಲಭಿಸಲಿದೆ.