ಉಡುಪಿ, ಜೂ. 26 (DaijiworldNews/TA): ನಗರದಲ್ಲಿ ಮಳೆ ಬಿರುಗಾಳಿಯ ವಾತಾವರಣ ಇದೆ. ಅದರಲ್ಲೂ ಕಡಲ ತೀರದ ಪ್ರದೇಶಗಳಲ್ಲಿ ಮಳೆಯ ಜೊತೆ ಗಾಳಿಯ ತೀವ್ರತೆ ಜೋರಾಗಿದೆ. ಪೂರ್ವ ಮುಂಗಾರು ಆಗಮನ ಸೂಚನೆ ಸಿಕ್ಕಿದೆ. ಕಡಲಲ್ಲಿ ಕಡಲ ಅಲೆಗಳು ಮತ್ತು ಚಂಡಮಾರುತದ ಅಬ್ಬರ ಜೋರಾಗಿದೆ. ಕಳೆದ ಒಂದು ವಾರದಿಂದ ಉಡುಪಿ ಯಲ್ಲಿ ಭಾರೀ ಮಳೆಯಾಗುತ್ತಿದೆ. ಮೊದಲ ಮಳೆ ಸಾಕಷ್ಟು ಅವಾಂತರಗಳನ್ನು ಮಾಡಿದೆ. ಬಿರು ಬೇಸಿಗೆ ಮಧ್ಯೆ ಮಳೆ ರಾಯ ಕರುಣೆ ತೋರಿಸಿದ ಖುಷಿ ಒಂದು ಕಡೆಯಾದ್ರೆ ಬಿಡದೆ ಸುರಿದ ಮಳೆ ಸಾಕಷ್ಟು ನಷ್ಟ ಉಂಟು ಮಾಡಿದೆ.

ಸದ್ಯ ಜಿಲ್ಲೆಯಲ್ಲಿ ನಿರಂತರವಾಗಿ ಕಾಪು ಹೆಬ್ರಿ ,ಬೈಂದೂರು ಕಾರ್ಕಳ, ಉಡುಪಿ ಮುಂಜಾನೆ ,ಸಂಜೆ ವೇಳೆ ಮಳೆ ಸುರಿಯುತ್ತಿದೆ. ಕಳೆದ ವರ್ಷದ ಮಳೆಗಾಲಕ್ಕೆ ಹೋಲಿಸಿದರೆ ಈ ವರ್ಷ ಮಳೆಗಾಲದ ಸಿದ್ಧತೆ ಬೇಗನೇ ಸಿದ್ದರಾಗುವಂತೆ ಮಾಡಿದೆ. ಮತ್ತೊಂದೆಡೆ ಗಂಟೆಗೆ 55 ರಿಂದ 60 ಕಿಲೋಮೀಟರ್ ವೇಗದ ಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದೆ.
ಕಡಲ ತೀರದ ನಿವಾಸಿಗಳು ಜಾಗೃತೆಯಿಂದ ಇರುವಂತೆ ಸೂಚಿಸಲಾಗಿದೆ. ಮಳೆ ಜೊತೆ ಈ ಬಾರಿ ಗಾಳಿ ಅಬ್ಬರಿಸುತ್ತಿರುವುದು ಆತಂಕ ಮೂಡಿಸಿದೆ. ಅಲ್ಲದೆ ಸಮುದ್ರ ತೀರದ ನಿವಾಸಿಗಳಿಗೆ ಸಮುದ್ರ ನೋಡಲು ಬಂದ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಸಮುದ್ರ ತೀರದ ನಿವಾಸಿಗಳಿಗೆ ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಕರಾವಳಿಯಲ್ಲಿ ವ್ಯಾಪಕ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆಯನ್ನು ಸಹ ನೀಡಿದೆ.