ಬಂಟ್ವಾಳ, ಮೇ. 25 (DaijiworldNews/TA): ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನ ಸಿಬ್ಬಂದಿ ಬಂಟ್ವಾಳ ನಿವಾಸಿ ಕೇಶವ ಕಿಣಿ ಎಚ್.( 42) ಅವರು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದ ಘಟನೆ ಆದಿತ್ಯವಾರ ನಡೆದಿದೆ.

ಬ್ಯಾಂಕ್ ನಲ್ಲಿ ಹಾಗೂ ಬಂಟ್ವಾಳದಲ್ಲಿ ಕಿಣಿ ಎಂದೇ ಪ್ರಸಿದ್ದಿ ಪಡೆದ ಇವರು ಡಿ.ಸಿ.ಸಿ. ಬ್ಯಾಂಕ್ ನಲ್ಲಿ ಜೂನಿಯರ್ ಸೂಪರ್ ವೈಸರ್ ಮತ್ತು ಕ್ಲರಿಕಲ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ವಲಯ ಮೇಲ್ವಿಚಾರಕರಾಗಿಯೂ ಇವರು ಸೇವೆ ಸಲ್ಲಿಸಿದ್ದರು.
ಇವರು ತಾಯಿ ಹಾಗೂ ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ , ಡಿ.ಸಿ.ಸಿ. ಬ್ಯಾಂಕ್ ಎಂಡಿ.ಗೋಪಿನಾಥ್ ಭಟ್ , ನಿರ್ದೇಶಕ ರಾಜರಾಮ್ ಭಟ್ , ಪದ್ಮಶೇಖರ್ ಜೈನ್, ಪ್ರಕಾಶ್ ಶೆಟ್ಟಿ ತುಂಬೆ, ಸಹಿತ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.