ಮಂಗಳೂರು, ಮೇ.20 (DaijiworldNews/AK):ಮಂಗಳವಾರ, ಮೇ 20 ರಂದು ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಮತ್ತೆ ಗಲಾಟೆ ನಡೆದಿದ್ದು, ಅಡುಗೆ ಕೆಲಸದಲ್ಲಿ ನಿರತರಾಗಿದ್ದ ಮತ್ತೊಬ್ಬ ಕೈದಿಯ ಮೇಲೆ ಮುನೀರ್ ಎಂಬ ಕೈದಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ದಾಳಿಯ ನಂತರ ಸಹ ಕೈದಿಗಳ ಗುಂಪು ಮುನೀರ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸಿದಾಗ ಜೈಲಿನೊಳಗೆ ಅಶಾಂತಿಗೆ ಕಾರಣವಾಯಿತು ಎಂದು ವರದಿಯಾಗಿದೆ. ಜೈಲು ಸಿಬ್ಬಂದಿ ಕೂಡಲೇ ಮಧ್ಯಪ್ರವೇಶಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯುವಲ್ಲಿ ಯಶಸ್ವಿಯಾದರು. ಜೈಲು ಸಿಬ್ಬಂದಿಗಳು ಮುನೀರ್ ಮೇಲೆ ಆಗುತ್ತಿದ್ದ ಹಲ್ಲೆಯನ್ನು ತಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಬರ್ಕೆ ಪೊಲೀಸರು ಜೈಲು ಆವರಣಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಪ್ರಸ್ತುತ ಹೆಚ್ಚಿನ ತನಿಖೆ ನಡೆಯುತ್ತಿದೆ.