ಸುಳ್ಯ, ಮೇ. 07 (DaijiworldNews/AK): ಭಾರತೀಯ ಸೇನೆ ಪಾಕ್ ಉಗ್ರನೆಲೆಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿ ಭಯೋತ್ಪಾದಕರನ್ನು ಕೊಂದಿರುವುದು ಅಭಿನಂದನೀಯವಾದ ಕಾರ್ಯ ಎಂದು ಸುಳ್ಯದ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಹೇಳಿದ್ದಾರೆ.

ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಗ್ರರ ಚಟುವಟಿಕೆಗಳು ಭಾರತದಲ್ಲಿ ಇನ್ನು ಮುಂದೆ ನಡೆಯಬಾರದು ಎಂಬ ನಿಟ್ಟಿನಲ್ಲಿ ಸೇನೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ ಎಂದರು.
ಶಾಸಕ ಹರೀಶ್ ಪೂಂಜಾ ಅವರು ಕೋಮುಪ್ರಚೋದಕ ಸಂದೇಶ ನೀಡುತ್ತಿದ್ದಾರೆ. ಯೂತ್ ಕಾಂಗ್ರೆಸ್ ಇದನ್ನು ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.