ಕಾಸರಗೋಡು, ಏ.21 (DaijiworldNews/AK): ವಲಸೆ ಕಾರ್ಮಿಕರ ನಡುವೆ ನಡೆದ ಜಗಳದಿಂದ ಓರ್ವ ಬಲಿಯಾದ ಘಟನೆ ಕಾಸರಗೋಡಿನ ಆನೆಬಾಗಿಲು ಎಂಬಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಘಟನೆಗೆ ಸಂಬಂಧಪಟ್ಟಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸುಶಾಂತ್ ರಾಯ್ (28) ಕೊಲೆಗೀಡಾದವರು.

ಮೂರು ತಿಂಗಳ ಹಿಂದೆ ಆರು ಮಂದಿ ವಲಸೆ ಕಾರ್ಮಿಕರು ಕಾಸರಗೋಡಿಗೆ ಆಗಮಿಸಿ ಆನೆಬಾಗಿಲು ಬಳಿ ಕ್ವಾಟರ್ಸ್ ವೊಂದರಲ್ಲಿ ತಂಗಿದ್ದರು. ರವಿವಾರ ತಡರಾತ್ರಿ ಕ್ವಾಟರ್ಸ್ ನಲ್ಲಿ ಕಾರ್ಮಿಕರ ನಡುವೆ ಘರ್ಷಣೆ ನಡೆದಿದೆ.
ಈ ಸಂದರ್ಭದಲ್ಲಿ ಸುಶಾಂತ್ ಬಲಿಯಾಗಿದ್ದಾನೆ. ಹೊಡೆತಕ್ಕೆ ಬಲಿಯಾಗಿರಬಹುದು ಎಂದು ಪೋಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸುಶಾಂತ್ ನನ್ನು ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು.
ಮರಣೋತ್ತರ ಪರೀಕ್ಷೆ ವರದಿ ಲಭಿಸಿದ ಸಾವಿಗೆ ಕಾರಣ ಸ್ಪಷ್ಟಗೊಳ್ಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಜೊತೆಗಿದ್ದ ಇತರ ಆರು ಮಂದಿ ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದೀ , ಈ ಪೈಕಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ . ಇಬ್ಬರು ತಲೆಮರೆಸಿಕೊಂಡಿದ್ದಾರೆ.