ಬಂಟ್ವಾಳ, ಏ.03(DaijiworldNews/TA) : ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಗುರುವಾರ ಸಂಜೆ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಸಂದಾಯವಾಯಿತು.

ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿ ಸಮಾವೇಶಗೊಂಡ ಹೊರೆಕಾಣಿಕೆ ಮೆರವಣಿಗೆಗೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ ಚಾಲನೆ ನೀಡಿದರು. ಬಳಿಕ ರಾಷ್ಟ್ರೀಯ ಹೆದ್ದಾರಿಯ ಮೂಲಕ ಭವ್ಯ ಮೆರವಣಿಗೆಯಲ್ಲಿ ಹಸಿರುವಾಣಿಯನ್ನು ಕ್ಷೇತ್ರಕ್ಕೆ ತರಲಾಯಿತು. ಗೊಂಬೆ ಕುಣಿತ, ಬಣ್ಣದ ಕೊಡೆಗಳು, ಕುಣಿತ ಭಜನೆ, ಚೆಂಡೆ ವಾದಾನ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ರಾಜೇಶ್ ನಾಕ್ ಮೆರವಣಿಗೆಯಲ್ಲಿ ಭಾಗವಹಿಸಿದರು.
ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಬಿ. ವಿಶ್ವನಾಥ್, ಹಸಿರು ಹೊರೆಕಾಣಿಕೆ ಸಮಿತಿ ಸಂಚಾಲಕರಾದ ಬೇಬಿ ಕುಂದರ್, ದೇವದಾಸ್ ಶೆಟ್ಟಿ, ಸಹಸಂಚಾಲಕರಾದ ಚಂದ್ರಹಾಸ ಪಲ್ಲಿಪ್ಪಾಡಿ, ಲೋಕೇಶ್ ಸುವರ್ಣ ಅಲೆತ್ತೂರು, ವಿವಿಧ ಸಮಿತಿಗಳ ಪ್ರಮುಖರಾದ ಸಂಜೀವ ಪೂಜಾರಿ ಗುರುಕೃಪಾ, ಸತೀಶ ಭಂಡಾರಿ, ಚಂದ್ರಹಾಸ ಡಿ. ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ಪಿ. ಚಂದ್ರಪ್ರಕಾಶ್ ಶೆಟ್ಟಿ, ಎನ್. ಶಿವಶಂಕರ್, ಪದ್ಮಶೇಖರ್ ಜೈನ್, ಅಶ್ವನಿ ಕುಮಾರ್ ರೈ, ಐತಪ್ಪ ಪೂಜಾರಿ, ಕೆ. ನಾರಾಯಣ ಹೆಗ್ಡೆ, ಬಿ.ಮೋಹನ್, ಗೋಪಾಲ ಸುವರ್ಣ, ರವೀಂದ್ರ ಕಂಬಳಿ, ಪ್ರಭಾಕರ ಪ್ರಭು, ಪ್ರಸಾದ್ ಕುಮಾರ್ ರೈ, ರಾಜೇಶ್ ಎಲ್. ನಾಯಕ್, ಬಿ.ರಾಮಚಂದ್ರ ನಾಯಕ್, ಸತೀಶ್ ಶೆಟ್ಟಿ ಮೊಡಂಕಾಪು, ಸತೀಶ್ ಕುಮಾರ್ ರಮೇಶ್ ಸಾಲ್ಯಾನ್, ಪುಷ್ಪರಾಜ ಶೆಟ್ಟಿ, ವಸಂತರಾವ್, ಸದಾಶಿವ ಕೈಕಂಬ, ಚಿತ್ತರಂಜನ್ ಶೆಟ್ಟಿ, ಐತಪ್ಪ ಆಳ್ವ, ಚಂದ್ರಶೇಖರ ಭಂಡಾರಿ, ಮಚ್ಚೇಂದ್ರ ಸಾಲ್ಯಾನ್ ನಾರಾಯಣ ಪೆರ್ನೆ, ಶ್ರೀಧರ ಮಲ್ಲಿ, ಪ್ರಮೋದ್ ಕುಮಾರ್, ಪದ್ಮನಾಭ ಆಚಾರ್ಯ, ನೇಮಿರಾಜ ಶೆಟ್ಟಿ, ಉಮೆಶ್ ಕುಮಾರ್ ವೈ, ರಘುಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.