ಕಾಸರಗೋಡು, ಏ.03(DaijiworldNews/TA) : ಭಾರೀ ಮೌಲ್ಯದ ಹ್ಯಾಶಿಸ್ ಸಹಿತ ಓರ್ವನನ್ನು ಅಬಕಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಉಪ್ಪಳ ಮಣ್ಣಂ ಗುಳಿಯ ಕಲಂದರ್ ಶಾಫಿ (30) ಬಂಧಿತ ಆರೋಪಿ.

ಈತನ ಮನೆ ಮತ್ತು ಕಾರಿನಿಂದ 450 ಗ್ರಾಂ ಹ್ಯಾಶಿಸ್ ನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಜೊತೆಗಿದ್ದ ಇನ್ನೋರ್ವ ಆರೋಪಿ ಯಾಸಿರ್ ಪರಾರಿ ಯಾಗಿದ್ದಾನೆ. ವಾಹನ ತಪಾಸಣೆ ವೇಳೆ 130 ಗ್ರಾಂ ಹ್ಯಾಶಿಸ್ ಪತ್ತೆಯಾಗಿತ್ತು.
ಬಳಿಕ ಈತನ ಮನೆಗೆ ದಾಳಿ ನಡೆಸಿದ ಸಿಬ್ಬಂದಿಗಳು 320 ಗ್ರಾಂ ಹ್ಯಾಶಿಸ್ ನ್ನು ವಶಪಡಿಸಿಕೊಂಡರು. ಕೆಲ ದಿನಗಳ ಹಿಂದೆ ಕಲಂದರ್ ಶಾಫಿಯನ್ನು 100 ಗ್ರಾಂ ಗಾಂಜಾ ಸಹಿತ ಬಂಧಿಸಲಾಗಿತ್ತು. ಬಳಿಕ ಜಾಮೀನು ನಲ್ಲಿ ಬಿಡುಗಡೆಗೊಂಡಿದ್ದನು.