ಉಡುಪಿ,ಮಾ.20(DaijiworldNews/AK): ಕಾರು ಹಾಗೂ ಟಿಪ್ಪರ್ ಅಪಘಾತ ನಡೆದ ಘಟನೆ ನಿಟ್ಟೂರು ಪೆಟ್ರೋಲ್ ಪಂಪ್ ಬಳಿ ನಡೆದಿದೆ.


ಉಡುಪಿಯಿಂದ ಕುಂದಾಪುರ ಕಡೆ ತೆರಳುತ್ತಿದ್ದ ವೇಳೆ ಕಾರಿನ ಹಿಂಭಾಗಕ್ಕೆ ಎರಡು ಬಾರಿ ಟಿಪ್ಪರ್ ಗುದ್ದಿದೆ. ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.ಇದೇ ವೇಳೆ ಚಾಲಕ ಮತ್ತು ಕಾರಿನ ಚಾಲಕನ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ ಟಿಪ್ಪರ್ ಚಾಲಕ,ಮಾಲಕರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.