ಮಂಗಳೂರು,ಜೂ 4 Daijiworld News/MSP): ಕರಾವಳಿಯ ಜನತೆ ಬಹುವಾಗಿ ನಂಬುವ ಭೂತಾರಾಧನೆ, ನಾಗಮಂಡಲ ಮತ್ತು ನಾಗಾರಾಧನೆಯ ಬಗ್ಗೆ ಗೌರಿಗದ್ದೆ ಆಶ್ರಮದ ಶ್ರೀ ವಿನಯ್ ಗುರೂಜಿ ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿನಯ್ ಗುರೂಜಿ, ಒಂದುವರೆ, ಎರಡು ಕೋಟಿ ರೂಪಾಯಿ ಖರ್ಚು ಮಾಡಿ ನಾಗಮಂಡಲ ಮಾಡುವ ಬದಲು ಜನರಿಗೆ ರಸ್ತೆ ಮಾಡಬಾರದಾ ಎನ್ನುವ ಪ್ರಶ್ನೆಯನ್ನು ಎತ್ತಿದ್ದಾರೆ. ಗುರೂಜಿ ಅವರ ಹೇಳಿಕೆಗೆ ಕರಾವಳಿ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಅಡಕೆಯ ಹಿಂಗಾರವನ್ನು ಮೈಮೇಲೆ ಹೊಡೆದುಕೊಳ್ಳುವ, ಮುಖಕ್ಕೆ ಉಜ್ಜಿಕೊಳ್ಳುವ ನಾಗಪಾತ್ರಿಗಳಿಗೆ ಅದನ್ನು ಬೆಳೆಯಲು ಎಷ್ಟು ಕಷ್ಟವಿದೆ ಎನ್ನುವ ಅರಿವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಕರಾವಳಿ ಜನರ ನಂಬಿಕೆಯ ಭೂತಾರಾಧನೆಯ ಬಗ್ಗೆಯೂ ಇದೇ ರೀತಿಯಾಗಿ ಮಾತನಾಡಿದ್ದು, ಪಂಜುರ್ಲಿ ದೈವಕ್ಕೆ ಬ್ರಾಹ್ಮಣರ ಮನೆಗೆ ಹೋದಾಗ ಇಡ್ಡಿ, ಶೆಟ್ರ ಮನೆಗೆ ಹೋದರೆ ಕೋಳಿ ಅದು ಹೇಗೆ ಪಂಜುರ್ಲಿ ಚೇಂಜ್ ಲಗುತ್ತಾನೆ. ದೇವರು ನಮ್ಮಲ್ಲಿ ಇರುವುದು ಶ್ರದ್ಧೆ ತರುವುದಕ್ಕೆ, ಅಂಧ ವಿಶ್ವಾಸಕ್ಕಲ್ಲ. ಆಚರಣೆಗೆ ನನ್ನ ನಮಸ್ಕಾರ, ಯಕ್ಷಗಾನ, ಆರಾಧನೆಗಳು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ, ಅದರೆ ಅದು ವ್ಯಾಪಾರ ಆಗಬಾರದು ಎಂದಿರುವುದು ಜನರ ಅಕ್ರೋಶಕ್ಕೆ ಕಾರಣವಾಗಿದೆ.