ಕಾರ್ಕಳ, ಮೇ 24 (Daijiworld News/SM): ಮೆಸ್ಕಾಂ ಕಛೇರಿಯ ಮುಂಭಾಗ ನಿರ್ಮಾಣ ಹಂತದಲ್ಲಿರುವ ನಿರ್ಮಿತಿ ಕೇಂದ್ರದ ಹೊರಾಂಗದಲ್ಲಿ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಬೆಳಗಾವಿ ಮೂಲದ ರಾಮದುರ್ಗದ ಬಸಪ್ಪ ಭೀಮಪ್ಪ ಗಟ್ಟಿ(43) ಮೃತ ವ್ಯಕ್ತಿ ಎಂಬುವುದಾಗಿ ಗುರುತಿಸಲಾಗಿದೆ.

ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ ಕಾವಲುಗಾರನಾಗಿ ಕಳೆದ ೬ ತಿಂಗಳಿನಿಂದ ಕೆಲಸ ನಿರ್ವಹಿಸುತ್ತಿದ್ದ ಅವರು ವಿಪರೀತ ಮದ್ಯಸೇವನೆ ಹೊಂದಿದ್ದರು. ಇದೇ ಕಾರಣದಿಂದಾಗಿ ಅವರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಇನ್ನು ಮೃತದೇಹ ಪತ್ತೆಯಾದ ಪರಿಸರದಲ್ಲಿ ಮದ್ಯದ ಪ್ಯಾಕೇಟ್ ಕೂಡ ಪತ್ತೆಯಾಗಿದೆ.
ಘಟನೆಯ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.