ನ್ಯೂಯಾರ್ಕ್, ಜೂ 30 (DaijiworldNews/DB): ಮಹಿಳೆ ಮತ್ತು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಖ್ಯಾತ ಗಾಯಕನೊಬ್ಬನಿಗೆ ಅಮೆರಿಕಾ ನ್ಯಾಯಾಲಯ 30 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಗಾಯಕ ಆರ್. ಕೆಲಿ ಅವರೇ ಸುದೀರ್ಘ ಶಿಕ್ಷೆಗೆ ಗುರಿಯಾದ ಗಾಯ. ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು ಈ ತೀರ್ಪು ವಿಧಿಸಿದೆ. ಗರಿಷ್ಠ 17 ವರ್ಷವಾದರೂ ಜೈಲು ಶಿಕ್ಷೆ ವಿಧಿಸಬಹುದು. ಮೂರು ದಶಕ ಶಿಕ್ಷೆ ಅಗತ್ಯವಿಲ್ಲ ಎಂದು ಕೆಲಿ ಪರ ವಕೀಲರು ವಾದಿಸಿದ್ದರು. ಆದರೆ ಇದು ಬಹುದೊಡ್ಡ ಅಪರಾಧವಾಗಿದ್ದು, ಸಾರ್ವಜನಿಕರ ಮೇಲೂ ಪರಿಣಾಮ ಉಂಟಾಗಲಿದೆ ಎಂದು ಕೋರ್ಟ್ ತಿಳಿಸಿತ್ತು.
55 ವರ್ಷದ ಕೆಲಿ ಮುಂದೆ ಮೂರು ದಶಕ ಜೈಲಿನಲ್ಲೇ ಕಳೆಯಬೇಕಾಗಿದೆ. ಈತನ ವಿರುದ್ದ ಕಳೆದ ಸೆಪ್ಟಂಬರ್ನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.