ಕಾಬೂಲ್, ಜೂ 22 (DaijiworldNews/MS): ಬುಧವಾರ ಮುಂಜಾನೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಕೆಲವು ಭಾಗಗಳಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ತಿಳಿಸಿದೆ.
ಈ ಭೂಕಂಪದಲ್ಲಿ ಕನಿಷ್ಠ 130 ಜನರು ಸಾವನ್ನಪ್ಪಿದ್ದು, ಕನಿಷ್ಠ 250 ಜನರು ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಎಂದು ಹೇಳಿದರು.
ಆಗ್ನೇಯ ಅಫ್ಘಾನಿಸ್ತಾನದ ಖೋಸ್ಟ್ ನಗರದಿಂದ ಸುಮಾರು 44 ಕಿಮೀ (27 ಮೈಲುಗಳು) ದೂರದಲ್ಲಿ ಭೂಕಂಪ ಸಂಭವಿಸಿದ್ದು 51 ಕಿಮೀ ಆಳದಲ್ಲಿದೆ. ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಆಗ್ನೇಯದಲ್ಲಿದೆ ಎಂದು USGS ಹೇಳಿದೆ.
ಯುರೋಪಿಯನ್ ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ (EMSC) ಪ್ರಕಾರ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಭಾರತದಲ್ಲಿ ಸುಮಾರು 119 ಮಿಲಿಯನ್ ಜನರು ಸುಮಾರು 500 ಕಿಮೀ ವ್ಯಾಪ್ತಿಯಲ್ಲಿ ಕಂಪನವನ್ನು ಅನುಭವಿಸಿದ್ದಾರೆ ಎಂದು ಹೇಳಿದೆ.
ಕಳೆದ ಶುಕ್ರವಾರವೂ ಪಾಕಿಸ್ತಾನದಲ್ಲಿ ಭೂಕಂಪ ಸಂಭವಿಸಿತ್ತು. ಬಳಿಕ ಇಸ್ಲಾಮಾಬಾದ್, ಪೇಶಾವರ, ರಾವಲ್ಪಿಂಡಿ ಮತ್ತು ಮುಲ್ತಾನ್ನಲ್ಲಿ ಈ ಕಂಪನದ ಅನುಭವವಾಗಿತ್ತು. ಫೈಸಲಾಬಾದ್, ಅಬೋಟಾಬಾದ್, ಸ್ವಾತ್, ಬುನೇರ್, ಕೊಹತ್ ಮತ್ತು ಮಲ್ಕಂಡಿಯಲ್ಲಿಯೂ ಈ ಕಂಪನದ ಅನುಭವವಾಗಿದೆ.