ಮನಿಲಾ, ಅ.24 (DaijiworldNews/AA): ಫಿಲಿಪ್ಪೀನ್ಸ್ನ ವಾಯುನೆಲೆಯೊಂದರಲ್ಲಿ ತರಬೇತಿಯ ವೇಳೆ ಎರಡು ಸೇನಾ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಪತನಗೊಂಟ ಪರಿಣಾಮ ನಾಲ್ವರು ಪೈಲಟ್ಗಳು ಸಾವನ್ನಪ್ಪಿದ್ದಾರೆ.

ಶುಕ್ರವಾರ ಮಧ್ಯಾಹ್ನ ಮನಿಲಾದ ದಕ್ಷಿಣಕ್ಕಿರುವ ಫರ್ನಾಂಡೊ ವಾಯುನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ SF-260 ಏಕ-ಪ್ರೊಪೆಲ್ಲರ್ ವಿಮಾನಗಳು ಪತನಗೊಂಡವು.
ಎರಡೂ ವಿಮಾನಗಳು ಬೇಸ್ ಆವರಣದ ಒಳಗೇ ಪತನಗೊಂಡವು. ಈ ದುರ್ಘಟನೆಗೆ ಕಾರಣ ತಿಳಿಯಲು ತನಿಖೆಯನ್ನು ಆರಂಭಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಾಯುಪಡೆಯ SF-260 ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಫಿಲಿಪೈನ್ ವಾಯುಪಡೆಯ ವಕ್ತಾರ ಕರ್ನಲ್ ಆಲ್ವಿನ್ ಕ್ಯಾಪಿಂಗುಯಿಯನ್ ತಿಳಿಸಿದ್ದಾರೆ.