ಬೀಜಿಂಗ್, ಅ.22 (DaijiworldNews/AA): ಟಿಬೆಟ್ನಲ್ಲಿ ಗುರುವಾರ ರಾತ್ರಿ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.

ಗುರುವಾರ ಟಿಬೆಟ್ನಲ್ಲಿ ಎರಡು ಭೂಕಂಪಗಳು ಸಂಭವಿಸಿದೆ. ಕೇವಲ ಒಂದು ಗಂಟೆಯ ಅಂತರದಲ್ಲಿ ಈ ಎರಡು ಕಂಪನಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಗುರುವಾರ ರಾತ್ರಿ 8.03ಕ್ಕೆ, ಅರುಣಾಚಲ ಪ್ರದೇಶದ ಪಾಂಡಿನ್ನಿಂದ ಸುಮಾರು 489 ಕಿ.ಮೀ ವಾಯುವ್ಯಕ್ಕೆ ಟಿಬೆಟ್ನಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ. ಸಮುದ್ರ ಮಟ್ಟಕ್ಕಿಂತ 173 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಆದರೆ, ಅದಾದ ಸ್ವಲ್ಪ ಸಮಯದ ನಂತರ 5.0 ತೀವ್ರತೆಯ ಮತ್ತೊಂದು ಭೂಕಂಪವು ರಾತ್ರಿ 8.42ರ ಸುಮಾರಿಗೆ ಅರುಣಾಚಲ ಪ್ರದೇಶದ ಬಸರ್ನ ವಾಯುವ್ಯ-ವಾಯವ್ಯಕ್ಕೆ 323 ಕಿ.ಮೀ ದೂರದಲ್ಲಿ ಸಂಭವಿಸಿದೆ. ಸಮುದ್ರ ಮಟ್ಟಕ್ಕಿಂತ 15 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ.
45 ನಿಮಿಷಗಳ ಒಳಗೆ ಈ ಪ್ರದೇಶದಲ್ಲಿ 2 ಪ್ರಮುಖ ಭೂಕಂಪಗಳು ಸಂಭವಿಸಿವೆ. ಟಿಬೆಟ್ ಮತ್ತು ಚೀನಾದ ದೊಡ್ಡ ಪ್ರದೇಶಗಳಲ್ಲಿ ಭೂಕಂಪದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಇನ್ನು ಈ ಭೂಕಂಪದಿಂದಾಗಿ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.