ಢಾಕಾ, ಅ.17 (DaijiworldNews/AA): ಬಾಂಗ್ಲಾದೇಶದ ಆಗ್ನೇಯ ಭಾಗದಲ್ಲಿರುವ ಕಡಲತೀರದ ರೆಸಾರ್ಟ್ ಒಂದರಲ್ಲಿ ಶನಿವಾರ ಅಗ್ನಿ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ 10 ಮಂದಿ ದುರ್ಮರಣ ದೊಂದಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಕಾಕ್ಸ್ ಬಜಾರ್ ಜಿಲ್ಲೆಯ ಇನಾನಿಯಲ್ಲಿರುವ 'ತುಪ್ತುಪ್ ರೆಸ್ಟೋ & ರೆಸಾರ್ಟ್'ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ರೆಸಾರ್ಟ್ ಬಂಗಾಳ ಕೊಲ್ಲಿಯ ಸಮೀಪದಲ್ಲಿದೆ. ಬೆಳಗ್ಗೆ ಬೆಂಕಿ ಕಾಣಿಸಿಕೊಂಡು, ಮೂರು ಅಂತಸ್ತಿನ ಮರದ ರೆಸಾರ್ಟ್ನಾದ್ಯಂತ ವೇಗವಾಗಿ ಹರಡಿಕೊಂಡಿತು. ಮೃತಪಟ್ಟವರಲ್ಲಿ ಮಕ್ಕಳೂ ಇದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.