ವಾಷಿಂಗ್ಟನ್, ಅ.11 (DaijiworldNews/AA): ರಷ್ಯಾ ಮತ್ತು ಉಕ್ರೇನ್ ನಡುವೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಇಂಧನ ಕದನ ವಿರಾಮ ಒಪ್ಪಂದಕ್ಕೆ ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಭಾನುವಾರ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಎರಡೂ ದೇಶಗಳು ಇಂಧನ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು, ಇದನ್ನು ಉಲ್ಲಂಘಿಸಬೇಡಿ' ಎಂದು ಮಾಸ್ಕೋ ಮತ್ತು ಕೈವ್ಗೆ ಮನವಿ ಮಾಡಿಕೊಂಡಿದ್ದಾರೆ.
'ತಕ್ಷಣದಿಂದ ಜಾರಿಗೆ ಬರುವಂತೆ ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಇಂಧನ ಕದನವಿರಾಮ ಜಾರಿಯಾಗಿದೆ. ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಇದನ್ನು ಯಾರೂ ಮುರಿಯಬೇಡಿ! ಈ ವಿಷಯವನ್ನು ಗಮನಿಸಿದ್ದಕ್ಕೆ ಧನ್ಯವಾದಗಳು' ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಆದರೆ ಈ ಒಪ್ಪಂದದ ಬಗ್ಗೆ ರಷ್ಯಾ ಅಥವಾ ಉಕ್ರೇನ್ ಅಧಿಕೃತ ಹೇಳಿಕೆ ನೀಡುವ ಮುನ್ನವೇ ಟ್ರಂಪ್ ಈ ಪೋಸ್ಟ್ ಮಾಡಿದ್ದಾರೆ. ಇನ್ನು ಈ ಕದನ ವಿರಾಮದ ನಿಖರ ಷರತ್ತುಗಳು ಹಾಗೂ ವ್ಯಾಪ್ತಿಯ ಬಗ್ಗೆ ಟ್ರಂಪ್ ಯಾವುದೇ ವಿವರಗಳನ್ನ ನೀಡಿಲ್ಲ.