ಸನಾ, ಅ.11 (DaijiworldNews/AA): ಯೆಮೆನ್ಗೆ ತೆರಳುತ್ತಿದ್ದ ದೋಣಿ ಮುಳುಗಿ 15 ಮಕ್ಕಳು ಸೇರಿದಂತೆ ಬರೋಬ್ಬರಿ 109 ಮಂದಿ ಮೃತಪಟ್ಟಿರುವ ಘಟನೆ ಪೂರ್ವ ಆಫ್ರಿಕಾ ಕರಾವಳಿಯಲ್ಲಿ ನಡೆದಿದೆ.

ಉದ್ಯೋಗ ಮತ್ತು ಭದ್ರತಾ ದೃಷ್ಟಿಯಿಂದ ಹಾರ್ನ್ ಆಫ್ ಆಫ್ರಿಕಾ ಪ್ರದೇಶದ ಸಾವಿರಾರು ವಲಸಿಗರು ದೋಣಿಯ ಮೂಲಕ ಜಿಬೂಟಿಯಿಂದ ಯೆಮೆನ್ಗೆ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ. ಘಟನೆ ವೇಳೆ ದೋಣಿಯಲ್ಲಿ 305 ಮಂದಿ ಪ್ರಯಾಣಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ವೇಳೆ ದೋಣಿ ದುರಂತಕ್ಕೀಡಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ ಮಾಹಿತಿ ನೀಡಿದೆ.
ಈ ಅವಘಡದಲ್ಲಿ 52 ಪುರುಷರು, 42 ಮಹಿಳೆಯರು ಮತ್ತು 15 ಮಕ್ಕಳು ಮೃತಪಟ್ಟಿದ್ದಾರೆ. ೮೦ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, 116 ಮಂದಿ ನಾಪತ್ತೆಯಾಗಿದ್ದಾರೆ.