ಟೆಹ್ರಾನ್, ಸೆ.28 (DaijiworldNews/AK):ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಮತ್ತೊಂದು ನೀರೊಳಗಿನ ದೈತ್ಯ ಡ್ರೋನ್ಅನ್ನು ವಶಕ್ಕೆ ಪಡೆದಿರುವುದಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿಕೊಂಡಿದೆ.

ವಶಪಡಿಸಿಕೊಂಡ ಡ್ರೋನ್ಅನ್ನು ಎಂಕೆ-18 ಮೋಡ್-2 ಕಿಂಗ್ಫಿಶ್ (Mk 18 Mod 2 Kingfish) ಎಂದು ಗುರುತಿಸಲಾಗಿದೆ. ಇರಾನ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಡ್ರೋನ್ಅನ್ನು ʻREMUS 600ʼ ಎಂದು ಈ ಹಿಂದೆ ಗುರುತಿಸಿದ್ದರು. ಇದೀಗ ಅದರ ಗುರುತಿನ ಅಪ್ಡೇಟ್ ಕೊಟ್ಟಿದ್ದಾರೆ. ಆದ್ರೆ ಇರಾನ್ನ ಹೇಳಿಕೆಯನ್ನು ಅಮೆರಿಕ ಸಾರಸಗಟಾಗಿ ನಿರಾಕರಿಸಿದೆ.
ಐಆರ್ಜಿಸಿ ವಕ್ತಾರ ಸೆಕೆಂಡ್ ಬ್ರಿಗೇಡಿಯರ್ ಜನರಲ್ ಹೊಸೇನ್ ಮೊಹೆಬ್ಬಿ ಅವರು ಈ ಬಗ್ಗೆ ‘X’ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅಮೆರಿಕದ ʻMk 18 Mod 2 Kingfishʼ ಸ್ವಯಂಚಾಲಿತ ನೀರೊಳಗಿನ ಡ್ರೋನ್ ಅನ್ನು (AUV) ಇರಾನ್ನ ನೌಕಾಪಡೆ ವಶಕ್ಕೆ ಪಡೆದಿದೆ ಎಂದು ತಿಳಿಸಿದ್ದಾರೆ.