ವಾಷಿಂಗ್ಟನ್ , ಸೆ. 10 (DaijiworldNews/AK): ಜೋರ್ಡಾನ್ನಲ್ಲಿರುವ ಮುವಾಫಕ್ ಸಾಲ್ಟಿ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಹಲವಾರು ಅಮೇರಿಕದ ಮಿಲಿಟರಿ ವಿಮಾನಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.

ಅಮೆರಿಕ ಐದು ಇರಾನಿನ ಟ್ಯಾಂಕರ್ಗಳನ್ನು ಮುಳುಗಿಸಿದ್ದಕ್ಕೆ ಈ ಪ್ರತಿಕಾರದ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಯಲ್ಲಿ ಸುಮಾರು ಎಂಟು ಎಫ್ -15 ಯುದ್ಧ ವಿಮಾನಗಳಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ. ‘ವಾರ್ಥಾಗ್’ ಎಂದು ಕರೆಯಲ್ಪಡುವ ಎ -10 ಥಂಡರ್ಬೋಲ್ಟ್ ವಿಮಾನಕ್ಕೂ ಕೂಡ ಹಾನಿಯಾಗಿದೆ. ದಾಳಿ ಬಳಿಕ ವಿಮಾನದ ಒಂದು ರೆಕ್ಕೆ ಕಣ್ಮರೆಯಾಗಿದೆ. ಈ ದಾಳಿಯ ಬಳಿಕ ವಾಯುನೆಲೆಯನ್ನು ರಕ್ಷಿಸಲು ಯುಎಸ್ ಪಡೆ 30ಕ್ಕೂ ಹೆಚ್ಚು ಪೇಟ್ರಿಯಾಟ್ ಕ್ಷಿಪಣಿಗಳನ್ನು ನಿಯೋಜಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮುವಾಫಕ್ ಸಾಲ್ಟಿ ವಾಯುನೆಲೆಯಲ್ಲಿ ಭಾರೀ ಸ್ಫೋಟ ಸಂಭವಿಸಿರುವುದನ್ನು ನೋಡಬಹುದಾಗಿದೆ. ಇದರೊಂದಿಗೆ ಇರಾನ್ನ ಸರ್ಕಾರಿ ಮಾಧ್ಯಮ ಜೋರ್ಡಾನ್ ಕಡೆಗೆ ಕ್ಷಿಪಣಿಗಳನ್ನು ಹಾರಿಸುತ್ತಿರುವ ದೃಶ್ಯಗಳನ್ನು ಸಹ ಬಿಡುಗಡೆ ಮಾಡಿದೆ. ಜೋರ್ಡಾನ್ನ ಸಶಸ್ತ್ರ ಪಡೆಗಳು ಇರಾನ್ನ 20 ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ 18ನ್ನು ತಡೆದಿವೆ. ಉಳಿದ ಎರಡು ಕ್ಷಿಪಣಿಗಳು ಜನವಸತಿಯಿಲ್ಲದ ಪ್ರದೇಶಗಳಲ್ಲಿ ಬಿದ್ದಿವೆ ಎಂದು ಜೋರ್ಡಾನ್ ಮಿಲಿಟರಿ ತಿಳಿಸಿದೆ.