ಸನಾ, ಸೆ. 04 (DaijiworldNews/AA): ಯೆಮನ್ನ ಹೌತಿಗಳು ಮತ್ತು ಸೌದಿ ಬೆಂಬಲಿತ ಸರ್ಕಾರಿ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ 81 ಜನರು ಮೃತಪಟ್ಟಿದ್ದಾರೆ.

ಇರಾನ್ ಬೆಂಬಲಿತ ಬಂಡುಕೋರರು ಕೆಂಪು ಸಮುದ್ರದ ಗಡಿಯಲ್ಲಿರುವ ಪ್ರದೇಶದತ್ತ ಸಾಗುತ್ತಿದ್ದಾರೆ. ಕೆಂಪು ಸಮುದ್ರದ ದಕ್ಷಿಣ ಪ್ರವೇಶದ್ವಾರದಲ್ಲಿರುವ ಕಿರಿದಾದ ಬಾಬ್ ಅಲ್-ಮಂದಾಬ್ ಜಲಸಂಧಿಯ ನಿಯಂತ್ರಣಕ್ಕಾಗಿ ಹೌತಿಗಳು ಕರಾವಳಿ ಪ್ರದೇಶಗಳ ಬಳಿ ರಾಕೆಟ್ ಮತ್ತು ಡ್ರೋನ್ ದಾಳಿ ನಡೆಸಿದ ಬಳಿಕ ಘರ್ಷಣೆ ನಡೆದಿದೆ.
ಇತ್ತೀಚಿನ ವಾರಗಳಲ್ಲಿ ಹೌತಿಗಳು ಕೆಂಪು ಸಮುದ್ರದಲ್ಲಿ ಸೌದಿ ಹಡಗುಗಳ ಮೇಲೆ ಪದೇ ಪದೇ ದಾಳಿ ನಡೆಸುತ್ತಿದ್ದಾರೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ದಿಗ್ಬಂಧನ ಮಾಡುವ ಮೂಲಕ ಕೊಲ್ಲಿಯಿಂದ ತೈಲ ರಫ್ತಿಗೆ ಇದು ಪರ್ಯಾಯ ಮಾರ್ಗವಾಗಿದೆ.