ದೋಹಾ, ಆ. 30 (DaijiworldNews/AA): ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಫಯಾಝ್ ಅಹ್ಮದ್ (57) ಅವರು ಕತಾರ್ನ ದೋಹಾದಲ್ಲಿ ಭಾನುವಾರ, ಆಗಸ್ಟ್ 30ರಂದು ನಿಧನರಾದರು.

ಕಳೆದ 30 ವರ್ಷಗಳಿಂದ ಅವರು ಬಿನ್ ಓಮ್ರಾನ್ ಕಂಪನಿಯಲ್ಲಿ ಹಣಕಾಸು ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃದು ಸ್ವಭಾವ, ಸರಳತೆ ಹಾಗೂ ಸೌಹಾರ್ದಯುತ ವ್ಯಕ್ತಿತ್ವದಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಫಯಾಝ್ ಅಹ್ಮದ್ ಅವರು ಕತಾರ್ನಲ್ಲಿನ ಹಲವು ಭಾರತೀಯ ಸಮುದಾಯ ಸಂಘಟನೆಗಳು ಹಾಗೂ ವೇದಿಕೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಅವರು ಕೆಎಂಸಿಎ ಕತಾರ್, ಹಿದಾಯ ಫೌಂಡೇಶನ್ ಕತಾರ್ ಸೇರಿದಂತೆ ಹಲವು ಭಾರತೀಯ ಸಮುದಾಯ ಸಂಘಟನೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕತಾರ್ನ ಪ್ರಮುಖ ಸಮುದಾಯ ಮುಖಂಡರಾದ ಸಾಕಿಬ್ ರಝಾ ಖಾನ್, ಡಾ. ರವಿ ಶೆಟ್ಟಿ, ಅಶ್ಮತ್ ಅಲಿ, ಅಬ್ದುಲ್ಲಾ ಮೋನು, ವಿಜಯ್ ಕೆ., ತುಳುಕೂಟದ ಸಂಸ್ಥಾಪಕ ಸದಸ್ಯ ಎಂ. ಇಕ್ಬಾಲ್ ಮನ್ನಾ ಸೇರಿದಂತೆ ಹಲವರು ಫಯಾಜ್ ಅಹ್ಮದ್ ಅವರ ಹಠಾತ್ ನಿಧನಕ್ಕೆ ಆಘಾತ ಹಾಗೂ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಫಯಾಜ್ ಅಹ್ಮದ್ ಅವರು ಪತ್ನಿ, ಪುತ್ರ ಹಾಗೂ ಅಪಾರ ಸ್ನೇಹಿತರು ಮತ್ತು ಹಿತೈಷಿಗಳನ್ನು ಅಗಲಿದ್ದಾರೆ.