International
ವಿಯೆನ್ನಾದಲ್ಲಿ ಪ್ರತಿಷ್ಠಿತ WORLDCOB ಬಿಸಿನೆಸ್ ಅವಾರ್ಡ್ಗೆ ಭಾಜನವಾದ ಅಲ್ಡೋವಿಯಾ ರೆಸಾರ್ಟ್ & ಕನ್ವೆನ್ಷನ್
- Sat, Aug 29 2026 11:25:00 AM
-
ವಿಯೆನ್ನಾ, ಆ. 29 (DaijiworldNews/AA): ಬೆಂಗಳೂರಿನ ಸ್ವಿಸ್ ಟೌನ್ನಲ್ಲಿರುವ ಅಲ್ಡೋವಿಯಾ ರೆಸಾರ್ಟ್ & ಕನ್ವೆನ್ಷನ್ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ. ಅಮೆರಿಕದ ಟೆಕ್ಸಾಸ್ನ ಹ್ಯೂಸ್ಟನ್ ಮೂಲದ ವಿಶ್ವ ವ್ಯಾಪಾರ ಸಂಸ್ಥೆಗಳ ಒಕ್ಕೂಟ (WORLDCOB) ವತಿಯಿಂದ ಆಗಸ್ಟ್ 25ರಂದು ಆಸ್ಟ್ರಿಯಾದ ವಿಯೆನ್ನಾದ ಇಂಟರ್ಕಾಂಟಿನೆಂಟಲ್ ವೀನ್ನಲ್ಲಿ ನಡೆದ ದಿ ಬಿಜ್ ಅವಾರ್ಡ್ಸ್ 2026 ಸಮಾರಂಭದಲ್ಲಿ ಸಂಸ್ಥೆಗೆ ಈ ಗೌರವ ಲಭಿಸಿದೆ.














ಈ ಅಂತಾರಾಷ್ಟ್ರೀಯ ಸಮಾರಂಭದಲ್ಲಿ ಹಲವು ದೇಶಗಳ ಪ್ರಮುಖ ಉದ್ಯಮ ಸಂಸ್ಥೆಗಳು ಹಾಗೂ ಕೈಗಾರಿಕಾ ಸಂಸ್ಥೆಗಳು ಭಾಗವಹಿಸಿದ್ದವು. ವಿವಿಧ ವಿಭಾಗಗಳಲ್ಲಿ ಒಟ್ಟು 33 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. WORLDCOBನ ಮೌಲ್ಯಮಾಪನ ಸಮಿತಿಯ ಶಿಫಾರಸಿನ ಮೇರೆಗೆ ಅಲ್ಡೋವಿಯಾ ರೆಸಾರ್ಟ್ & ಕನ್ವೆನ್ಷನ್ ಅನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಒಟಿಎ ಹಾಗೂ ವಿವಿಧ ರಿವ್ಯೂ ಅಗ್ರಿಗೇಟರ್ಗಳ ಅಂಕಿಅಂಶಗಳ ಆಧಾರದ ಮೇಲೆ ಸಂಸ್ಥೆಯ ವ್ಯವಹಾರಿಕ ಶ್ರೇಷ್ಠತೆ, ನಾಯಕತ್ವ ಮತ್ತು ಆತಿಥ್ಯ ಗುಣಮಟ್ಟವನ್ನು ಪರಿಗಣಿಸಲಾಗಿದೆ.
ಪ್ರಮುಖ ಗೌರವಗಳಲ್ಲಿ ಒಂದಾದ "ವರ್ಲ್ಡ್ ಬಿಸಿನೆಸ್ ಲೀಡರ್" ಪ್ರಶಸ್ತಿಯನ್ನು ಅಲ್ಡೋವಿಯಾ ರೆಸಾರ್ಟ್ & ಕನ್ವೆನ್ಷನ್ಗೆ ಪ್ರದಾನ ಮಾಡಲಾಯಿತು. ನಿರಂತರವಾಗಿ ವ್ಯವಹಾರಿಕ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತಿರುವ ಸಂಸ್ಥೆಯಾಗಿ ಈ ಗೌರವ ನೀಡಲಾಗಿದೆ. WORLDCOBನ ಮೌಲ್ಯಮಾಪನ ಸಮಿತಿಯ ಶಿಫಾರಸಿನ ಮೇರೆಗೆ ಸಂಸ್ಥೆಗೆ "ರಿಕಗ್ನಿಷನ್ ಆಫ್ ಇನ್ಸ್ಪಿರೇಷನಲ್ ಕಂಪನಿ" ಗೌರವವೂ ಲಭಿಸಿದೆ.
ವಿಯೆನ್ನಾದಲ್ಲಿ ನಡೆದ ಸಮಾರಂಭದಲ್ಲಿ ಅಲ್ಡೋವಿಯಾದ ನಾಯಕತ್ವ ತಂಡದ ಸದಸ್ಯರಿಗೂ ಗೌರವ ದೊರೆಯಿತು. ನಿಗೆಲ್ ರೂಫಸ್ ಕೊಲಾಕೊ ಅವರಿಗೆ ನಿರಂತರ ವ್ಯವಹಾರಿಕ ಶ್ರೇಷ್ಠತೆಗಾಗಿ "ವರ್ಲ್ಡ್ ಲೀಡರ್ ಬಿಸಿನೆಸ್ಪರ್ಸನ್" ಗೌರವ ನೀಡಲಾಯಿತು. ರಾಂಡಲ್ ಶಾನ್ ಕೊಲಾಕೊ ಅವರಿಗೆ "ಎಕ್ಸಲೆನ್ಸ್ ಇನ್ ಬಿಸಿನೆಸ್ ಲೀಡರ್ಶಿಪ್" ಹಾಗೂ ಬಾಲಾಜಿ ಮುಕುಂದ ಅವರಿಗೆ ವ್ಯವಹಾರ ನಿರ್ವಹಣೆಯಲ್ಲಿ ತೋರಿದ ಶ್ರೇಷ್ಠತೆಗಾಗಿ "ಎಕ್ಸಲೆನ್ಸ್ ಇನ್ ಬಿಸಿನೆಸ್ ಮ್ಯಾನೇಜ್ಮೆಂಟ್" ಪ್ರಶಸ್ತಿ ಲಭಿಸಿದೆ.
ಅಲ್ಡೋವಿಯಾ ಬ್ರ್ಯಾಂಡ್ ತನ್ನ ಆತಿಥ್ಯ ಕ್ಷೇತ್ರದ ಪಯಣದಲ್ಲಿ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಈ ಅಂತಾರಾಷ್ಟ್ರೀಯ ಗೌರವ ವಿಶೇಷ ಮಹತ್ವ ಪಡೆದುಕೊಂಡಿದೆ. ಎರಡು ದಶಕಗಳ ಕಾಲ ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಷನ್ ರೆಸಾರ್ಟ್ ಮತ್ತು ಸ್ಪಾ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಈ ಪ್ರತಿಷ್ಠಿತ ಸಂಸ್ಥೆಯು ಇದೀಗ ಅಲ್ಡೋವಿಯಾ ರೆಸಾರ್ಟ್ & ಕನ್ವೆನ್ಷನ್ ಆಗಿ ರೂಪಾಂತರಗೊಂಡಿದೆ. ಸಂಸ್ಥೆಯ ಮಾಲೀಕ ಹಾಗೂ ಸಂಸ್ಥಾಪಕರಾದ ಡಾ. ರೊನಾಲ್ಡ್ ಕೊಲಾಕೊ ಅವರ ದೂರದೃಷ್ಟಿಯನ್ನು ಮುಂದುವರಿಸಿಕೊಂಡು ಹೊಸ ಬ್ರ್ಯಾಂಡ್ ಅಸ್ತಿತ್ವಕ್ಕೆ ಬಂದಿದೆ. ದೆಹಲಿ, ಜೈಪುರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕ್ಲಾರ್ಕ್ಸ್ ಎಕ್ಸೋಟಿಕಾ ಬ್ರ್ಯಾಂಡ್ ಅನ್ನು ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ, ಆಸ್ತಿ ಹಾಗೂ ಹೋಟೆಲ್ನ ಮಾಲೀಕತ್ವವನ್ನು ಉಳಿಸಿಕೊಂಡು ಅಲ್ಡೋವಿಯಾ ರೆಸಾರ್ಟ್ & ಕನ್ವೆನ್ಷನ್ ಎಂಬ ಹೊಸ ಬ್ರ್ಯಾಂಡ್ ಅಡಿಯಲ್ಲಿ ಮುಂದುವರಿಯಲು ಡಾ. ರೊನಾಲ್ಡ್ ಕೊಲಾಕೊ ನಿರ್ಧರಿಸಿದ್ದರು.
ಇಂಟಿಗ್ರೇಟೆಡ್ ಟೌನ್ಶಿಪ್ ಅಭಿವೃದ್ಧಿ ಹಾಗೂ ಆತಿಥ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಡಾ. ಕೊಲಾಕೊ ಅವರು ಹಾಲಿವುಡ್ ಟೌನ್, ಸ್ವಿಸ್ ಟೌನ್, ಓವಲ್ ರೀಫ್, ಸೆರೀನ್ ಗಾರ್ಡನ್ಸ್ ಮತ್ತು ಪಾರ್ಕ್ಲ್ಯಾಂಡ್ ವ್ಯೂ ಸೇರಿದಂತೆ ಅಂತಾರಾಷ್ಟ್ರೀಯ ಗುಣಮಟ್ಟದ ಹಲವು ಪ್ರಮುಖ ಯೋಜನೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಡೋವಿಯಾ ಕುರಿತ ಅವರ ಪರಿಕಲ್ಪನೆಯು ಕೇವಲ ಭೌತಿಕ ವೈಭವವನ್ನಷ್ಟೇ ಅಲ್ಲದೆ, ಸೌಜನ್ಯ, ಆತ್ಮೀಯತೆ, ಭಾವನೆ ಮತ್ತು ಅರ್ಥಪೂರ್ಣ ಮಾನವೀಯ ಅನುಭವಗಳನ್ನೂ ಒಳಗೊಂಡ ನಿಜವಾದ ಐಷಾರಾಮವನ್ನು ಪ್ರತಿಪಾದಿಸುತ್ತದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಸುಮಾರು 70 ಎಕರೆ ಪ್ರದೇಶದಲ್ಲಿ, ಸಂಸ್ಥೆಯೇ ಅಭಿವೃದ್ಧಿಪಡಿಸಿರುವ ಸುಮಾರು 300 ಎಕರೆ ವಿಸ್ತೀರ್ಣದ ಟೌನ್ಶಿಪ್ನಲ್ಲಿ ಅಲ್ಡೋವಿಯಾ ರೆಸಾರ್ಟ್ & ಕನ್ವೆನ್ಷನ್ ನಿರ್ಮಾಣಗೊಂಡಿದೆ. ಮೂರು ಈಜುಕೊಳಗಳು ಹಾಗೂ ವಿವಿಧ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಲಭ್ಯಗಳನ್ನು ಹೊಂದಿರುವ ಈ ತಾಣವು ಐಷಾರಾಮಿ ಆತಿಥ್ಯ, ಬೃಹತ್ ಸಮಾವೇಶಗಳು, ವಿವಾಹಗಳು, ಕಾರ್ಪೊರೇಟ್ ಕಾರ್ಯಕ್ರಮಗಳು, ಮನರಂಜನೆ, ಆರೋಗ್ಯ ಮತ್ತು ಕ್ಷೇಮ ಸೇವೆಗಳು ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಸೌಲಭ್ಯ ಒದಗಿಸುತ್ತದೆ.
ಅಲ್ಡೋವಿಯಾ ರೆಸಾರ್ಟ್ & ಕನ್ವೆನ್ಷನ್ನಲ್ಲಿ ಒಟ್ಟು 11 ಒಳಾಂಗಣ ಔತಣಕೂಟ ಸಭಾಂಗಣಗಳಿವೆ. ಈ ಪೈಕಿ ಓಷನ್ ಕನ್ವೆನ್ಷನ್ ಸೆಂಟರ್ ದಕ್ಷಿಣ ಭಾರತದಲ್ಲಿನ ಪಂಚತಾರಾ ಹೋಟೆಲ್ಗೆ ಹೊಂದಿಕೊಂಡಿರುವ ಅತಿದೊಡ್ಡ ಒಳಾಂಗಣ ಕನ್ವೆನ್ಷನ್ ಸೆಂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದರೊಂದಿಗೆ ಹಲವು ಕಾರ್ಯಕ್ರಮ ಸ್ಥಳಗಳು, ಓಯಸಿಸ್-ಫಾರ್ಮಲ್ ಬಾರ್, ಮೂರು ಪ್ರತ್ಯೇಕ ರೆಸ್ಟೋರೆಂಟ್ಗಳಾದ ಬಹುಪಾಕಶೈಲಿಯ ಅಂಬ್ರೋಸಿಯಾ, ಪ್ಯಾನ್-ಏಷ್ಯನ್ ಶೋಗನ್ ಮತ್ತು ಮೆಡಿಟರೇನಿಯನ್ ಗ್ರಿಲ್ಸ್ ಎಂಬರ್, ಹಾಗೂ ಮಿರಾಜ್ ಕೆಫೆ ಕೂಡ ಇವೆ. ಆಯುರ್ವೇದ ಚಿಕಿತ್ಸೆಗಳು, ಅರೋಮಾಥೆರಪಿ ಮತ್ತು ಆಧುನಿಕ ಕ್ಷೇಮ ಚಿಕಿತ್ಸಾ ವಿಧಾನಗಳನ್ನು ಒದಗಿಸುವ ಆರೋಗ್ಯ ಮತ್ತು ಕ್ಷೇಮ ಸ್ಪಾ, ವಿಶಾಲ ಹಸಿರು ಪರಿಸರ ಹಾಗೂ ಮನರಂಜನಾ ಸೌಲಭ್ಯಗಳೊಂದಿಗೆ ಅಲ್ಡೋವಿಯಾ ಬೆಂಗಳೂರಿನ ಪ್ರಮುಖ ಆತಿಥ್ಯ ಮತ್ತು ಸಮಾವೇಶ ತಾಣವಾಗಿ ಗುರುತಿಸಿಕೊಂಡಿದೆ.
2026ರ ಈ ಗೌರವವು WORLDCOBನೊಂದಿಗೆ ಆಸ್ತಿಯ ದೀರ್ಘಕಾಲದ ಪ್ರಶಸ್ತಿ ಸಂಬAಧಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಈ ಸಂಸ್ಥೆ ಈ ಹಿಂದೆ 2015ರಲ್ಲಿ ಓಮನ್ನ ಮಸ್ಕಟ್ನಲ್ಲಿ ನಡೆದ ದಿ ಬಿಜ್ ಅವಾರ್ಡ್ಸ್ ಹಾಗೂ 2017ರಲ್ಲಿ ಯುಎಇಯ ದುಬೈನಲ್ಲಿ ನಡೆದ ದಿ ಬಿಜ್ 2017 ಪೀಕ್ ಆಫ್ ಸಕ್ಸೆಸ್ ಅವಾರ್ಡ್ಸ್ನಲ್ಲಿ ಗೌರವಕ್ಕೆ ಪಾತ್ರವಾಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯನ್ನು ಪ್ರೇರಣಾದಾಯಕ ಕಂಪನಿಯಾಗಿಯೂ ಗುರುತಿಸಲಾಗಿತ್ತು.
ಡಾ. ರೊನಾಲ್ಡ್ ಕೊಲಾಕೊ ಅವರ ಪಾಲಿಗೆ ಈ ಅಂತಾರಾಷ್ಟ್ರೀಯ ಮನ್ನಣೆ ಕೇವಲ ವ್ಯವಹಾರಿಕ ಸಾಧನೆಯಲ್ಲ. ಮೂರೂವರೆ ದಶಕಗಳಿಗೂ ಹೆಚ್ಚು ಕಾಲದ ಅವರ ವೃತ್ತಿಜೀವನದೊಂದಿಗೆ ಶಿಕ್ಷಣ, ಆರೋಗ್ಯ ಸೇವೆ, ಸಾರ್ವಜನಿಕ ಮೂಲಸೌಕರ್ಯ ಮತ್ತು ಸಮುದಾಯ ಕಲ್ಯಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ವ್ಯಾಪಕ ಸಮಾಜಮುಖಿ ಹಾಗೂ ಪರೋಪಕಾರಿ ಕಾರ್ಯಗಳು ಕೂಡ ಸಾಗಿವೆ. ಇತ್ತೀಚಿನ ಅಂತಾರಾಷ್ಟ್ರೀಯ ಗೌರವಗಳು ಅಲ್ಡೋವಿಯಾದ ಹೊಸ ಗುರುತನ್ನು ಮತ್ತಷ್ಟು ಬಲಪಡಿಸಿದ್ದು, ಶ್ರೇಷ್ಠತೆ, ಉದ್ದೇಶಪೂರ್ವಕ ಸೇವೆ ಹಾಗೂ ಆತ್ಮೀಯ ಆತಿಥ್ಯದಿಂದ ಗುರುತಿಸಿಕೊಳ್ಳುವ ಭಾರತೀಯ ಆತಿಥ್ಯ ಬ್ರ್ಯಾಂಡ್ ನಿರ್ಮಿಸುವ ಸಂಸ್ಥೆಯ ಬದ್ಧತೆಯನ್ನು ಪ್ರತಿಬಿಂಬಿಸಿವೆ.
"ಈ ಅಂತಾರಾಷ್ಟ್ರೀಯ ಮನ್ನಣೆ ಕೇವಲ ವ್ಯವಹಾರಿಕ ಯಶಸ್ಸಿಗೆ ದೊರೆತ ಪ್ರಶಸ್ತಿಯಲ್ಲ; ಅಲ್ಡೋವಿಯಾದ ಹಿಂದಿರುವ ಜನರು, ಮೌಲ್ಯಗಳು ಮತ್ತು ಉದ್ದೇಶಗಳಿಗೆ ದೊರೆತ ಮಾನ್ಯತೆ. ಶ್ರೇಷ್ಠತೆಯನ್ನು ನಿರೀಕ್ಷಿಸುವ, ಆತಿಥ್ಯವು ಹೃದಯದಿಂದ ಹೊರಹೊಮ್ಮುವ ಹಾಗೂ ಪ್ರತಿಯೊಬ್ಬ ಅತಿಥಿಯೂ ನೈಜ ಆತ್ಮೀಯತೆ ಮತ್ತು ಸೌಜನ್ಯದ ಅನುಭವವನ್ನು ತಮ್ಮೊಂದಿಗೆ ಕೊಂಡೊಯ್ಯುವ ತಾಣವನ್ನು ನಿರ್ಮಿಸುವುದು ನಮ್ಮ ಪ್ರಯತ್ನ," ಎಂದು ಅಲ್ಡೋವಿಯಾ ಆಡಳಿತ ಮಂಡಳಿ ತಿಳಿಸಿದೆ. "Aldovia is where grace finds you" ಎಂಬ ಸಂದೇಶವನ್ನು ಸಂಸ್ಥೆ ಮತ್ತೊಮ್ಮೆ ಸಾರಿದೆ.