ವಾಷಿಂಗ್ಟನ್, ಆ. 25 (DaijiworldNews/AA): ಹೆಚ್-1ಬಿ ವೀಸಾ ಮತ್ತು ಎಫ್-1 ಐಚ್ಛಿಕ ಪ್ರಾಯೋಗಿಕ ತರಬೇತಿ (ಒಟಿಪಿ) ಕಾರ್ಯಕ್ರಮಗಳ ಮೇಲೆ ಹೊಸ ಶುಲ್ಕ ವಿಧಿಸಲು ಅಮೆರಿಕ ಮುಂದಾಗಿದೆ.

ಹೆಚ್-1ಬಿ ವೀಸಾ ಶುಲ್ಕವನ್ನು 103,265 ಡಾಲರ್ಗೆ (ಅಂದಾಜು 99 ಲಕ್ಷ ರೂ.) ಹೆಚ್ಚುಸುವ ಕುರಿತು ಪ್ರಸ್ತಾಪಿತ ನಿಯಮಾವಳಿಯನ್ನು ಅಮೆರಿಕದ ಗೃಹ ಭದ್ರತಾ ಇಲಾಖೆ ಪ್ರಕಟಿಸಿದೆ. ಯುಎಸ್ ಡಿಹೆಚ್ಎಸ್ ಹೊಸ ನಿಯಮಗಳನ್ನು ಪ್ರಸ್ತಾಪಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಈ ನಿಯಮ ಜಾರಿಗೆ ಬಂದರೆ, H-1B ಮತ್ತು OPT ಕಾರ್ಯಕ್ರಮಗಳ ಮೇಲೆ ಹೊಸ ಶುಲ್ಕವನ್ನು ವಿಧಿಸಬಹುದು ಎನ್ನಲಾಗಿದೆ. ಕಳೆದ ವರ್ಷ ಟ್ರಂಪ್ ಸರ್ಕಾರ ಹೆಚ್-1ಬಿ ವೀಸಾ ಮೇಲೆ ವಿಧಿಸಿದ್ದ ಹೆಚ್ಚುವರಿ ಶುಲ್ಕವನ್ನು ಕೋರ್ಟ್ ರದ್ದುಗೊಳಿಸಿತ್ತು.