ಕೈವ್, ಜು. 29 (DaijiworldNews/AA): ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದ್ದು, ಕಪ್ಪು ಸಮುದ್ರ ಬಂದರಿನ ಬಳಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಯುತ್ತಿದೆ. ಪರಿಣಾಮ ಚೋರ್ನೊಮೊರ್ಸ್ಕ್ ಬಂದರಿನಲ್ಲಿ 13 ಭಾರತೀಯ ನಾವಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಡಗಿನ ಸಮೀಪದಲ್ಲಿ ಪುನರಾವರ್ತಿತ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಯುತ್ತಿದೆ. ಯಾವುದೇ ಕ್ಷಣದಲ್ಲಾದ್ರೂ ನೇರವಾಗಿ ಹಡಗಿಗೆ ಡಿಕ್ಕಿ ಹೊಡೆಯುವ ಭಯದಲ್ಲಿ ಹಡಗಿನ ಸಿಬ್ಬಂದಿ ಬದುಕುತ್ತಿದ್ದಾರೆ. ನಾವೀಕರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಹಾಗೂ ಹಡಗಿನ ಮಾಲೀಕರಿಗೆ ಭಾರತೀಯ ನಾವಿಕರ ಒಕ್ಕೂಟ ಮನವಿ ಮಾಡಿದೆ.
ಹಡಗಿನಿಂದ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾದ ವೀಡಿಯೊವನ್ನು ಒಕ್ಕೂಟ ಎಕ್ಸ್ನಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ಹಡಗಿನ ಸುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸುತ್ತಿದೆ. ಇದು ಬಂದರಿನಲ್ಲಿನ ಮೇಲೆ ನಡೆದ ದಾಳಿ. ಯಾವುದೇ ಕ್ಷಣದಲ್ಲಾದ್ರೂ ನೇರವಾಗಿ ಹಡಗಿಗೆ ಕ್ಷಿಪಣಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.