ಇಸ್ಲಾಮಾಬಾದ್, ಜು. 22 (DaijiworldNews/AA): ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನ ಸಾಲಕ್ಕಾಗಿ ಮತ್ತೆ ಅಮೆರಿಕ ಮುಂದೆ ಕೈಚಾಚಿದೆ. ಪಾಕ್ ಅಮೆರಿಕದ ಮುಂದೆ ಸುಮಾರು 10 ಬಿಲಿಯನ್ ಡಾಲರ್ (ಅಂದಾಜು 1,000ಕೋಟಿ ರೂ.) ಸಾಲದ ಬೇಡಿಕೆಯಿಟ್ಟಿರುವುದಾಗಿ ಹೇಳಲಾಗುತ್ತಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯ ಬೇಲ್ಔಟ್ ಕಾರ್ಯಕ್ರಮದ ಹೊರತಾಗಿಯೂ, ಪಾಕಿಸ್ತಾನವು ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿದೆ. ಹೀಗಾಗಿ ಐದು ವರ್ಷಗಳ ಅವಧಿಗೆ 10 ಬಿಲಿಯನ್ ಡಾಲರ್ಗಳ ದ್ವಿಪಕ್ಷೀಯ ವಿನಿಮಯ ಸ್ಥಿರೀಕರಣ ಬೆಂಬಲ ಸೌಲಭ್ಯವನ್ನು ಕೇಳಿ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ಗೆ ಮನವಿ ಸಲ್ಲಿಸಿರುವುದಾಗಿ ವರದಿಯಾಗಿದೆ.
ಅಮೆರಿಕ-ಇರಾನ್ ಯುದ್ಧ ಶಾಂತಿ ಒಪ್ಪಂದದ ಸಂದರ್ಭದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿತ್ತು. ಇದು ತನ್ನ ರಾಜತಾಂತ್ರಿಕ ಪ್ರೊಫೈಲ್ ಅನ್ನು ಹೆಚ್ಚಿಸಿದೆ. ವಾಷಿಂಗ್ಟನ್ ಮತ್ತು ಇತರ ಪಾಲುದಾರರಿಂದ ಆರ್ಥಿಕ ಲಾಭಗಳನ್ನು ಪಡೆಯಬಹುದು ಎಂಬ ಭರವಸೆಯಲ್ಲಿ ಪಾಕಿಸ್ತಾನವಿದೆ.